Connect with us

    LATEST NEWS

    UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

    ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೂ. 18ರಂದು ನಡೆಸಿದ್ದ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಯುಜಿಸಿ-ನೆಟ್‌)ಯನ್ನೂ ಕೇಂದ್ರ ಸರಕಾರ ಬುಧವಾರ ರದ್ದುಗೊಳಿಸಿದೆ. ಈ ಪರೀಕ್ಷೆಯಲ್ಲೂ ಅಕ್ರಮ ನಡೆದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವಾಲಯ ಈ ಕ್ರಮ ಕೈಗೊಂಡಿದೆ.

    ಜತೆಗೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ಹಸ್ತಾಂತರಿಸಲೂ ತೀರ್ಮಾನಿಸಲಾಗಿದೆ. ಜೂ. 18ರಂದು ದೇಶಾದ್ಯಂತ ಪರೀಕ್ಷೆ ನಡೆದಿತ್ತು.

    11 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಈ ಬೆನ್ನಲ್ಲೇ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನ್ಯಾಶನಲ್‌ ಸೈಬರ್‌ ಕ್ರೈಮ್‌ ಅನಾಲಿಟಿಕ್ಸ್‌ ಘಟಕವು ಮಾಹಿತಿ ನೀಡಿದೆ. ಹೀಗಾಗಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

    ಹೊಸದಾಗಿ ಪರೀಕ್ಷೆ ನಡೆಸುವ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಎನ್‌ಟಿಎ ವಿರುದ್ಧ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು.

    ಏನಿದು ಅಕ್ರಮ?
    -ಜೂ. 18ರಂದು ಪರೀಕ್ಷೆ ನಡೆದಿತ್ತು
    -11 ಲಕ್ಷ ಮಂದಿ ಪರೀಕ್ಷೆಯಲ್ಲಿ ಭಾಗಿ
    -ಇಲ್ಲೂ ಅಕ್ರಮ ನಡೆದ ಬಗ್ಗೆ ಸೈಬರ್‌ ಕ್ರೈಂ ಥೆÅಟ್‌ ಅನಾಲಿಟಿಕ್ಸ್‌ ಎಚ್ಚರಿಕೆ
    -ಪರೀಕ್ಷೆ ರದ್ದತಿಗೆ ಕೇಂದ್ರ ತೀರ್ಮಾನ
    -ಪ್ರಕರಣದ ತನಿಖೆ ಹೊಣೆ ಸಿಬಿಐಗೆ

    ಯಾರಿಗೆಲ್ಲ ಅನ್ವಯ?
    ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌ಡಿ ಪದವಿ ಪಡೆಯಲು, ವಿ.ವಿ.ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ, ಜೂನಿಯರ್‌ ರೀಸರ್ಚ್‌ ಫೆಲೋಶಿಪ್‌ಗೆ ಅರ್ಹತೆ ಪಡೆಯಲು ಯುಜಿಸಿ ಈ ಪರೀಕ್ಷೆ ನಡೆಸುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply