LATEST NEWS
ಅಕ್ರಮ ಗೋಸಾಗಾಟದಲ್ಲಿ ಉಡುಪಿ ಪೊಲೀಸರು ಭಾಗಿ ?
ಅಕ್ರಮ ಗೋಸಾಗಾಟದಲ್ಲಿ ಉಡುಪಿ ಪೊಲೀಸರು ಭಾಗಿ ?
ಮಂಗಳೂರು ಜುಲೈ 18: ಉಡುಪಿ ಜಿಲ್ಲೆಯಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿರುವ ಆತಂಕಕಾರಿ ವರದಿ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಪೊಲೀಸರು ಈಗಾಗಲೇ ಬಂಧಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಈಗ ಪೊಲೀಸರೇ ಭಾಗಿಯಾಗಿದ್ದು, ಆತಂಕಕ್ಕೀಡು ಮಾಡಿದೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 12 ರಂದು ಸಾಸ್ತಾನ ಟೋಲ್ ಗೇಟ್ ಬಳಿ ಪತ್ತೆಯಾದ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿ ಬೆಳಿಕಿಗೆ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ನಡೆದ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಜಿಲ್ಲೆಯ 7 ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಸಾಸ್ತಾನ ಟೋಲ್ ಗೆಟ್ ಬಳಿಯ ಅಕ್ರಮ ದನ ಸಾಗಾಟದಲ್ಲಿ ಕಳ್ಳರಿಗೆ ಬೆಂಬಲ ನೀಡಿದ್ದ ಇಬ್ಬರು ಪೊಲೀಸರ ಬಂಧಿಸಲಾಗಿದೆ. ಬಂಧಿತರನ್ನು ಸಂತೋಷ್ ಶೆಟ್ಟಿ, ವಿನೋದ್ ಗೌಡ ಎಂದು ಹೇಳಲಾಗಿದ್ದೆ. ಆದರೆ ಈ ಬಗ್ಗೆ ಬಂಧಿತರ ವಿವರ ನೀಡಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಅಲ್ಲದೆ ಇನ್ನೂ ನಾಲ್ವರು ಪೊಲೀಸರು ಈ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಡೆಸುವ ಹೈವೇ ಪೆಟ್ರೋಲ್ ಪಾಲುದಾರಿಕೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಪ್ರಕರಣದ ತನಿಖೆಗೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.