ಚೂರಿ ಇರಿದು ಪತ್ನಿಯನ್ನು ಕೊಲೆಗೈದು ಪತಿ ಆರೆಸ್ಟ್

ಪುತ್ತೂರು ಜುಲೈ 19: ಪತಿಯೇ ಪತ್ನಿಗೆ ಚೂರಿ ಇರಿದು ಕೊಲೆಗೈದ ಘಟನೆ ಪುತ್ತೂರು ತಾಲೂಕಿನ ಆರ್ಲಪದವಿನಲ್ಲಿ ನಡೆದಿದ್ದು, ಕೊಲೆಗೈದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ದುರ್ದೈವಿಯನ್ನು 22 ವರ್ಷದ ಅಕ್ಷತಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಗಣೇಶ್ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ, ಆದರೆ ಪೊಲೀಸರು ಆರೋಪಿ ಪತ್ತೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಗಣೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಷತಾ ಹಾಗೂ ಗಣೇಶ್‍ರಿಗೆ ವರ್ಷದ ಹಿಂದಷ್ಟೆ ಮದುವೆಯಾಗಿತ್ತು. ನಿನ್ನೆ ರಾತ್ರಿ ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಪತಿ ಗಣೇಶ್ ಪತ್ನಿ ಅಕ್ಷತಾಳಿಗೆ ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ನಂತರ ಆರೋಪಿ ಪರಾರಿಯಾಗಿದ್ದು, ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಗಣೇಶ್ ನನ್ನು ಅರ್ಲಪದವಿನಲ್ಲಿ ಬಂಧಿಸಿದ್ದಾರೆ.

Facebook Comments

comments