LATEST NEWS
ಉಡುಪಿ ಪೊಲೀಸ್ ಹಿರಿಮೆ ಕ್ಯಾಪ್ಟನ್ ನಿವೃತ್ತಿ – 400ಕ್ಕೂ ಅಧಿಕ ಪ್ರಕರಣ ತಪಾಸಣೆ ಮಾಡಿದ ಕ್ಯಾಪ್ಟನ್ ಗೆ ಬಿಳ್ಗೊಡುಗೆ
ಉಡುಪಿ ಅಕ್ಟೋಬರ್ 25: ಉಡುಪಿ ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಕಳೆದ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಗೊಂಡಿರುವ ಕ್ಯಾಪ್ಟನ್ ಶ್ವಾನವನ್ನು ಇಂದು ಪೊಲೀಸ್ ಅಧೀಕ್ಷಕ ರವರು ಜಿಲ್ಲಾ ಡಿ.ಎ.ಆರ್ ಕವಾಯಿತು ಮೈದಾನದಲ್ಲಿ ಪ್ರಶಂಶಿಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಹೊರರಾಜ್ಯ ,ಹೊರ ಜಿಲ್ಲೆಗಳಲ್ಲಿ ಸರಿಸುಮಾರು 400 ಕ್ಕೂ ಅಧಿಕ ವಿದ್ವಂಸಕ ಕೃತ್ಯ ತಪಾಸಣೆ ಕಾರ್ಯ ಯಶಸ್ವಿಯಾಗಿ ಪೂರೈಸಿದೆ.ಹೆಸರಿಗೆ ತಕ್ಕ ಹಾಗೆ ಕ್ಯಾಪ್ಟನ್ ಎಂಬ ಗರಿಮೆಯನ್ನು ಪಡೆದುಕೊಂಡು ವಲಯ ಮಟ್ಟದ ಕರ್ತವ್ಯಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು ಇಲಾಖೆಯ ಗೌರವವನ್ನು ಹೆಚ್ಚಿಸಿದೆ.
You must be logged in to post a comment Login