LATEST NEWS
ಉಡುಪಿಯಲ್ಲಿ ವೈರಲ್ ಆದ ಪೊಲೀಸ್ ವರ್ಸಸ್ ಯೋಧರ ಮಾತಿನ ಚಕಮಕಿ

ಉಡುಪಿಯಲ್ಲಿ ವೈರಲ್ ಆದ ಪೊಲೀಸ್ ವರ್ಸಸ್ ಯೋಧರ ಮಾತಿನ ಚಕಮಕಿ
ಉಡುಪಿ ಎಪ್ರಿಲ್ 29: ಬೆಳಗಾವಿ ಯೋಧ ಮತ್ತು ಪೊಲೀಸರ ಗಲಾಟೆ ನಡುವೆ ಈ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಪೊಲೀಸ್ ಹಾಗೂ ಯೋಧರ ನಡುವಿನ ಮಾತಿನ ಚಕಮಕಿ ವಿಡಿಯೋ ಈಗ ವೈರಲ್ ಆಗಿದೆ. ಒಂದು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಬೆಳಗಾವಿ ಘಟನೆ ನಂತರ ಈಗ ವೈರಲ್ ಆಗಿದೆ.
ಎನ್ ಸಿಸಿ ಮೈದಾನದಲ್ಲಿ ಸೈನಿಕರು ಗುಂಪುಗೂಡಿಕೊಂಡು ಕಬಡ್ಡಿ ಮತ್ತು ವಾಲಿಬಾಲ್ ಆಟವಾಡುತ್ತಿದ್ದ ರು. ಈ ವೇಳೆ ಅಲ್ಲಿಗೆ ತೆರಳಿದ ಉಡುಪಿ ಪೊಲೀಸರು ಲಾಕ್ ಡೌನ್ ನಿಯಮ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಅದನ್ನು ಪ್ರಶ್ನಿಸಿದರು. ಆದರೆ ಸೈನಿಕರು ತಾವು ಲಾಕ್ ಡೌನ್ ನಿಯಮ ಉಲ್ಲಂಘಿಸಿಲ್ಲ, ನಮ್ಮ ದೈಹಿಕ ಕ್ಷಮತೆಗಾಗಿ ಅಭ್ಯಾಸ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸೈನಿಕರ ವಾದವನ್ನು ಒಪ್ಪದ ಪೊಲೀಸರು ಲಾಕ್ ಡೌನ್ ನಿಯಮ ಸರ್ಕಾರದ ಆದೇಶ ಇದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ಈ ವಾದ ಒಪ್ಪದ ಸೈನಿಕರು, ನಮ್ಮ ಬೇಲಿ ದಾಟಿ ಒಳಗೆ ನೀವು ಯಾರೂ ಬರಕೂಡದು, ರಾಜ್ಯ ಸರಕಾರವಾಗಲಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗಾಗಲಿ ನಮ್ಮನ್ನು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಹೇಳಿದರು. ಆ ಬಳಿಕ ಎರಡು ಇಲಾಖೆಯ ನಡುವೆ ಮಾತಿನ ಚಕಮಕಿ ನಡೆದುದ್ದು ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು ತಿಂಗಳ ಹಿಂದೆ ನಡೆದ ಘಟನೆ ಎಂದು ವಿಶ್ಲೇಷಿಸಲಾಗುತ್ತಿದೆ.