LATEST NEWS
ಟಿವಿಯಲ್ಲಿ ನಮಾಜ್ ನೋಡುತ್ತಾ ಹಬ್ಬ ಆಚರಿಸಿದ ಉಡುಪಿ ಮುಸಲ್ಮಾನ ಬಾಂಧವರು
ಟಿವಿಯಲ್ಲಿ ನಮಾಜ್ ನೋಡುತ್ತಾ ಹಬ್ಬ ಆಚರಿಸಿದ ಉಡುಪಿ ಮುಸಲ್ಮಾನ ಬಾಂಧವರು
ಉಡುಪಿ ಮೇ.24: ಇಂದು ಕರಾವಳಿಯ ಮುಸಲ್ಮಾನ ಬಾಂಧವರಿಗೆ ಈದುಲ್ ಫಿತರ್ ಹಬ್ಬ. ಒಂದು ತಿಂಗಳ ರಂಜಾನ್ ಉಪವಾಸವನ್ನು ಮುಗಿಸಿದ ಮುಸ್ಲಿಮರು, ಮಸೀದಿಗೆ ತೆರಳಿ ಪ್ರಾರ್ಥನೆ ಸಾಧ್ಯವಾಗದ ಹಿನ್ನಲೆ ಇಂದು ಉಪವಾಸ ತೊರೆದು ಟಿವಿಯಲ್ಲಿ ನಮಾಜ್ ನೋಡುತ್ತಾ ಹಬ್ಬ ಆಚರಿಸುತ್ತಿದ್ದಾರೆ.
ಈದುಲ್ ಫಿತರ್ ಹಬ್ಬಕ್ಕೆ ಭಾನುವಾರದ ಕೊರೊನಾ ಕರ್ಫ್ಯೂ ಅಡ್ಡಿಯಾಗಿದೆ. ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡದಂತೆ ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಯಲ್ಲೇ ಹೇಗೆ ಹಬ್ಬ ಆಚರಿಸೋದು ಎಂದು ಆಲೋಚನೆ ಮಾಡಿದ ಉಡುಪಿಯ ಜಾಮಿಯಾ ಮಸೀದಿ, ಒಂದು ಪ್ಲಾನ್ ಮಾಡಿದೆ. ಉಡುಪಿಯಲ್ಲಿ ಕಾರ್ಯಾಚರಿಸುವ ಸಿ4ಯು ಖಾಸಗಿ ನೇರ ಪ್ರಸಾರ ಚಾನೆಲ್ ಮೂಲಕ ಹಬ್ಬದ ನಮಾಜ್, ಕುರಾನ್ ಪಠಣ ಮತ್ತು ಧಾರ್ಮಿಕ ವಿಧಿಯನ್ನು ನೇರ ಪ್ರಸಾರ ಮಾಡಲು ಮುಂದಾಗಿದೆ.
ಬೆಳಗ್ಗೆ ಎಂಟು ಗಂಟೆಯಿಂದ ಚಾನಲ್‍ನಲ್ಲಿ ಜಾಮಿಯಾ ಮಸೀದಿಯ ಧರ್ಮಗುರುಗಳು ಈದುಲ್ ಫಿತರ್ ಸಂದರ್ಭ ಅನುಸರಿಸುವ ಧಾರ್ಮಿಕ ವಿಧಿವಿಧಾನಗಳ ಬೋಧನೆಯನ್ನು ಮಾಡುತ್ತಾರೆ. ಮನೆಯಲ್ಲಿರುವ ಮುಸ್ಲಿಮರು ಟಿವಿ ನೋಡುತ್ತಾ ಅದನ್ನು ಫಾಲೋ ಮಾಡಬೇಕು. ಈ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಧಾರ್ಮಿಕ ವಿಧಿ ವಿಧಾನಕ್ಕೆ ಚ್ಯುತಿ ಬಾರದ ಹಾಗೆ ಉಡುಪಿಯ ಮುಸಲ್ಮಾನರು ಹಬ್ಬ ಆಚರಿಸಿದ್ದಾರೆ.