Connect with us

    LATEST NEWS

    ವೈಯುಕ್ತಿಕ ನಿಂದನೆ ಧಾರ್ಮಿಕ ವಿಚಾರ ಕೆರಳಿಸುವಂತ ರೀತಿಯಲ್ಲಿ ಮತಪ್ರಚಾರ ಮಾಡುವಂತಿಲ್ಲ – ಉಡುಪಿ ಜಿಲ್ಲಾಧಿಕಾರಿ

    ಉಡುಪಿ ಮಾರ್ಚ್ 16: ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಚುನಾವಣಾ ತಯಾರಿ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಮಾಹಿತಿ ನೀಡಿದ್ದಾರೆ.


    ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು,. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರ ಬರಲಿದ್ದು, ಉಡುಪಿ ಜಿಲ್ಲೆ ಯ ಉಡುಪಿ, ಕುಂದಾಪುರ, ಕಾರ್ಕಳ, ಕಾಪು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ , ಮೂಡಿಗೆರೆ , ಚಿಕ್ಕಮಗಳೂರು , ತರಿಕೆರೆ ವಿಧಾನಸಭಾ ಕ್ಷೇತ್ರಗಳಿವೆ.


    ಇನ್ನು ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸುವ ದಿನ ಮಾರ್ಚ್ 28, ಚುನಾವಣೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 04, ನಾಮಪತ್ರ ಪರಿಶೀಲನೆ ಎಪ್ರಿಲ್ 05, ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನ ಎಪ್ರಿಲ್ 08, ಚುನಾವಣೆ ನಡೆಯುವ ದಿನ ಎಪ್ರಿಲ್ 26.

    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 15,72,958, ಅದರಲ್ಲಿ ಪುರುಷ ಮತದಾರರು 7,62, 558, ಮಹಿಳಾ ಮತದಾರರು 8,10,362, ತೃತಿಯ ಲಿಂಗಿ 38 ಮಂದಿ ಇದ್ದಾರೆ. ಸೇವಾ ಮತದಾರರು 565 ಮಂದಿ, ವಿಕಲಚೇತನ ಮತದಾರರು 17959 , ಹಿರಿಯ ನಾಗರಿಕರ ಮತದಾರರು 21521 , ಪುರುಷ ಶತಾಯುಷಿ ಮತದಾರರು 205 , ಮಹಿಳಾ ಶತಾಯುಷಿ ಮತದಾರರು 331, ಒಟ್ಟು ಶತಾಯುಷಿ ಮತದಾರರು 536 ಮಂದಿ, ಯುವ ಮತದಾರರು 29 909 ಇದ್ದಾರೆ.

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1842 ಮತಗಟ್ಟೆಗಳಿದೆ.  ಇನ್ನು ಚುನಾವಣೆ ಪ್ರಚಾರಕ್ಕೆ ಬಾಲಕಾರ್ಮಿಕರನ್ನು ಬಳಸುವಂತೆ ಇಲ್ಲ, ಅಲ್ಲದೆ ಪ್ರಚಾರದ ವೇಳೆ ವೈಯುಕ್ತಿಕ ನಿಂದನೆ, ಧಾರ್ಮಿಕ ವಿಚಾರ ಕೆರಳಿಸುವಂತ ರೀತಿಯಲ್ಲಿ ಪ್ರಚಾರ ನಡೆಸುವಂತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ವೈಯಕ್ತಿಕ ಘನತೆ ಗೌರವಿಸಿ ಎಂದು ಮನವಿ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply