LATEST NEWS
ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಪುತ್ತಿಲ ಪರಿವಾರಕ್ಕೆ ಬೇಡವಾದ ಮಾಧ್ಯಮ
ಮಂಗಳೂರು ಮಾರ್ಚ್ 16: ಬಿಜೆಪಿಯಿಂದ ಬಂಡಾಯ ಎದ್ದು ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಬರುವವರೆಗೆ ಮಾಧ್ಯಮಗಳು ಬೇಕಾಗಿದ್ದ ಪುತ್ತಿಲ ಪರಿವಾರಕ್ಕೆ ಇದೀಗ ಮತ್ತೆ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಮಾಧ್ಯಮಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.
ಇಂದು ಮಂಗಳೂರಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ವರದಿ ಮಾಡಲು ಹೋಗಿದ್ದ ಪರ್ತಕರ್ತರ ಮೇಲೆ ಅರುಣ್ ಕುಮಾರ್ ಪುತ್ತಿಲ ಪರಿವಾರದ ಕಾರ್ಯಕರ್ತನೊಬ್ಬ ಗೂಂಡಾಗಿರಿ ಎಸಗಿದ ಆರೋಪ ಕೇಳಿ ಬಂದಿದೆ.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕಾರ್ಯಕ್ರಮವು ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದು, ಈ ಸಂದರ್ಭ ಪುತ್ತಿಲ ಪರಿವಾರದ ಕಾರ್ಯಕರ್ತ ಸಂದೀಪ್ ಉಪ್ಪಿನಂಗಡಿ ಎಂಬಾತ ಗೂಂಡಾಗಿರಿ ಎಸಗಿರುವುದಾಗಿ ವರದಿಯಾಗಿದೆ.
ವರದಿ ಮಾಡಲು ಹೋದ ಮಾಧ್ಯಮದವರನ್ನು ತಳ್ಳಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿ ‘ಮಾಧ್ಯಮದವರು ಇಲ್ಲಿ ಯಾಕೆ ಬರುವುದು? ನಮಗೆ ಮಾಧ್ಯಮದವರ ಅಗತ್ಯವಿಲ್ಲ. ನಾವು ಒಂದಾಗಿ ಆಯಿತು’ ಎಂದು ಸಂದೀಪ್ ಉಪ್ಪಿನಂಗಡಿ ದರ್ಪ ತೋರಿಸಿದ್ದಾರೆ.
You must be logged in to post a comment Login