Connect with us

    KARNATAKA

    ಉಡುಪಿ – ಪೊಲೀಸರ ನಿದ್ದೆಗೆಡಿಸಿದ ನಟೋರಿಯಸ್ ಕಚ್ಚಾ ಬನಿಯನ್ ಗ್ಯಾಂಗ್

    ಉಡುಪಿ ಡಿಸೆಂಬರ್ 22 : ಉಡುಪಿಯಲ್ಲಿ ಕಚ್ಚಾ ಬನಿಯನ್ ಗ್ಯಾಂಗ್ ಪೊಲೀಸರ ನಿದ್ದೆಗೆಡಿಸಿದೆ. ಉಡುಪಿಯ ವಸತಿ ಪ್ರದೇಶಗಳಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿದೆ. ತನಿಖೆಗೆಯ ಜಾಡು ಹಿಡಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿಲ್ಲ ಆದರೆ ತನಿಖೆಯಲ್ಲಿ ಬಹಿರಂಗವಾದ ಮಾಹಿತಿ ಎಲ್ಲರನ್ನು ಬೆಚ್ಚಿಬಿಳಿಸಿದೆ.


    ಸಂತಕಟ್ಟೆಯಲ್ಲಿನ ನವಮಿ ಬೇಕರಿ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಕಳ್ಳರು ಕೇವಲ ಚಡ್ಡಿಯನ್ನು ಹಾಕಿಕೊಂಡು, ಮೈತುಂಬಾಎಣ್ಣೆ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಇದರ ಆಧಾರದಲ್ಲಿ ಉಡುಪಿಯಲ್ಲೊಂದು ನಟೋರಿಯಸ್ ಗ್ಯಾಂಗ್ ಸಕ್ರಿಯವಾಗಿರುವುದು ಖಚಿತಗೊಂಡಿದೆ. ಕಚ್ಚಾ ಬನಿಯನ್ ಗ್ಯಾಂಗ್ ಆಲಿಯಾಸ್ ಚಡ್ಡಿ ಗ್ಯಾಂಗ್ ವಿಲಕ್ಷಣ ಮಾದರಿಯಲ್ಲಿ ಕಳ್ಳತನ ನಡೆಸುತ್ತಿದೆ. ಮೂಲಗಳ ಪ್ರಕಾರ ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಕಸುಬಿಗೆ ಇಳಿಯುವ ಈ ತಂಡ ಸ್ಥಳದಲ್ಲಿ ಒಂದು ಚಪ್ಪಲಿಯನ್ನು ಬಿಟ್ಟು ಹೋಗುತ್ತಿದೆ ಎನ್ನಲಾಗಿದೆ.


    ನಗರದ ವಸತಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಸಂತೆಕಟ್ಟಿನವಮಿ ಬೇಕರಿ ಮಾಲೀಕರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ದಲ್ಲಿ ಕಚ್ಚಾ ಬನಿಯನ್ ಗ್ಯಾಂಗ್‌ನ ಕೈವಾಡ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.
    1990-1991 ರಲ್ಲಿ ಈಶಾನ್ಯ ಭಾರತದ ರಾಜ್ಯಗಳು ಸೇರಿದಂತೆ ದಿಲ್ಲಿಯಲ್ಲಿ ಕಚ್ಚಾ ಬನಿಯನ್ ಗ್ಯಾಂಗ್ ಎಂಬ ಹೆಸರಿನ ತಂಡ ದರೋಡೆ, ಮನೆ ಕಳ್ಳತನ, ಕೊಲೆಗಳನ್ನು ನಡೆಸುತ್ತಾ ಸಕ್ರಿಯವಾಗಿತ್ತು. ಮೈಗೆ ಸಂಪೂರ್ಣ ಎಣ್ಣೆಯನ್ನು ಹಚ್ಚಿಕೊಂಡು ಕೇವಲ ಚಡ್ಡಿಯನ್ನು ಹಾಕಿಕೊಂಡು, ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದರು. ಇದೀಗ ಉಡುಪಿಯಲ್ಲಿ ಈಗ ಇಂತಹದ್ದೇ ಶೈಲಿಯ ತಂಡವೊಂದು ಸಕ್ರಿಯವಾಗಿ ಬೀಡು ಬಿಟ್ಟಿರು ವುದು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ.

    ಸಂಕಕಟ್ಟೆಯ ನವಮಿ ಬೇಕರಿ ಮಾಲೀಕರ ಮನೆಯಲ್ಲಿ ನಿದ್ರೆಯಲ್ಲಿದ್ದ ಸಮಯ ಮನೆಯ ಬಾಗಿಲನ್ನು ತನ್ನು ಒಡೆದು ಒಳಪ್ರವೇಶಿಸಿದ ಕಳ್ಳರು 2,50,000 ರೂ.ಗಳ ಚಿನ್ನಾಭರಣ ಕಳವುಗೈದಿದ್ದಾರೆ. ಈ ವೇಳೆ ಮನೆ ಮಂದಿ ಅಡ್ಡಿ ಪಡಿಸಿದರೆ, ಆಗಂತುಕರು ಹಲ್ಲೆ ನಡೆಸುತ್ತಾರೆಯೆ ಎಂಬುದರ ಬಗ್ಗೆ ಇಲಾಖೆಗೆ ಸ್ಪಷ್ಟತೆ ಇಲ್ಲ. ನಡೆಸಿದ ಪ್ರಕರಣಗಳು ದಾಖಲಾಗಿಲ್ಲ. ಆದರೂ ಈ ತಂಡ ಇಲಾಖೆಯ ನಿದ್ದೆಯನ್ನು ಕೆಡಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply