LATEST NEWS
ಉಡುಪಿಯಲ್ಲಿ ನ್ಯಾಯಾಧೀಶರಿಂದಲೇ ಪತ್ನಿಗೆ ಚಿತ್ರಹಿಂಸೆ : ದೂರು ದಾಖಲು
ಉಡುಪಿಯಲ್ಲಿ ನ್ಯಾಯಾಧೀಶರಿಂದಲೇ ಪತ್ನಿಗೆ ಚಿತ್ರಹಿಂಸೆ : ದೂರು ದಾಖಲು
ಉಡುಪಿ. ಡಿಸೆಂಬರ್ 07 : ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಾದ ನ್ಯಾಯಾಧೀಶರೇ ತನ್ನ ಪತ್ನಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಅಶೋಕ್ ತಿಮ್ಮಯ್ಯ ಎಂಬ ನ್ಯಾಯಾಧೀಶರೇ ಈ ಕೃತ್ಯ ನಡೆಸಿದ ವ್ಯಕ್ತಿ. ಈ ಬಗ್ಗೆ ನವೆಂಬರ್ ೧೫ ರಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಅಶೋಕ್ ತನ್ನ ಪತ್ನಿಗೆ ಚಿತ್ರಹಿಂಸೆ ಕೊಟ್ಟ ಪರಿಣಾಮ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಬಳಿಕ ಹಿರಿಯ ನ್ಯಾಯಾಧೀಶರ ಸಂಧಾನದಿಂದ ಪ್ರಕರಣ ಶಾಂತವಾಗಿತ್ತು . ಆದರೆ ಅಶೋಕ್ ಮತ್ತೆ ತನ್ನ ಚಾಳಿ ಮುಂದುವರಿಸಿ ಹಲ್ಲೆ ನಡೆಸಿದ್ದಾರೆ.
ಘಟನೆ ಹಿಂದಿನ ವಿಚಾರ:
ಅಶೋಕ್ ಮೂಲತ ಚನ್ನ ಪಟ್ಟಣದವರು. ಕಳೆದ ೬ ವರ್ಷಗಳ ಹಿಂದೆ ಕುಣಿಗಲ್ ನ ವರಲಕ್ಷ್ಮೀ ಎಂಬವರನ್ನು ವಿವಾಹವಾದರು. ವರಲಕ್ಷ್ಮೀ ಒಬ್ಬಳೇ ಮಗಳಾಗಿದ್ದು ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ವರಲಕ್ಷ್ಮಿಯೂ ಲಾ ಓದಿ ವಕೀಲಿ ವೃತ್ತಿ ಮಾಡುತ್ತಿದ್ದರು ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು. ವರಲಕ್ಷ್ಮೀ ತಾಯಿಗೆ ಮೈಸೂರಿನಲ್ಲಿ ಆಸ್ತಿ ಇದ್ದು ಅದನ್ನು ತನಗೆ ನೀಡುವಂತೆ ಅಶೋಕ್ ಹಿಂಸೆ ನೀಡುತ್ತಿದ್ದ. ಮದುವೆ ಆದ ಕೇವಲ ಕೆಲವೇ ದಿನಗಳಲ್ಲಿ ಅಶೋಕ್ ಪತ್ನಿಯ ಮೇಲೆ ಹಲ್ಲೆ ಆರಂಭಿಸಿದ್ದ. ಮದುವೆ ಆದಾಗ ವಕೀಲನಾಗಿದ್ದ ಅಶೋಕ ಕಳೆದ ವರ್ಷ ಜಡ್ಜ್ ಆಗಿ ಪ್ರಮೋಷನ್ ಆಗಿತ್ತು ಆ ಬಳಿಕ ಇನ್ನಷ್ಟು ಹಿಂಸೆ ನೀಡತೊಡಗಿದ.
ಮದುವೆ ಆದ ಹೊಸದರಲ್ಲಿ ಬೆಂಗಳೂರಿನಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದ ಅಶೋಕ ಜಡ್ಜ್ ಆಗಿ ಉಡುಪಿಗೆ ಪೋಸ್ಟಿಂಗ್ ಆಯ್ತು. ಆಗಲೇ ತಾನೊಬ್ಬ ನ್ಯಾಯಾಧೀಶ ಎಂಬ ಅಹಂ ತಲೆಗೇರಿತ್ತು. ದಿನ ಕಳೆದಂತೆ ಅಶೋಕನ ಚಿತ್ರಹಿಂಸೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಅಶೋಕ ನಡೆಸಿದ ಹಲ್ಲೆಯ ಪರಿಣಾಮ ಈಗಲೂ ವರಲಕ್ಷ್ಮಿಯ ತಲೆ ನೋವು ಕಮ್ಮಿಯಾಗಿಲ್ಲ. ಸಾಯಬೇಕೆಂದು ತೀರ್ಮಾನಿಸಿದ್ರೂ ತಾನು ಹೇಗಾದ್ರೂ ಮಾಡಿ ತನ್ನ ಬದುಕಿಗೆ ತನಗಾದ ಅನ್ಯಾಯದ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಿದ್ದಾರೆ. ಅದರಂತೆ ನವೆಂಬರ್ ೧೫ ರಂದು ದೂರು ದಾಖಲಾಗಿದ್ದು ಪೋಲೀಸರ ನಿರ್ದೇಶನದಂತೆ ಒಂದು ಸುತ್ತು ಕೌನ್ಸಿಲಿಂಗ್ ನಡೆಸಲಾಗಿದೆ. ಆದರೆ ವರಲಕ್ಷ್ಮೀ ತನ್ನ ಕರುಳ ಕುಡಿಯನ್ನು ಮಡಿಲಲ್ಲಿಟ್ಟು ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ.
ವಿಡಿಯೋಗಾಗಿ…