LATEST NEWS
ಸೋಮವಾರದಿಂದ ಉಡುಪಿಯಲ್ಲಿ ಉಚಿತ ಸಾರಿಗೆ ಸೇವೆ….!!
ಸೋಮವಾರದಿಂದ ಉಡುಪಿಯಲ್ಲಿ ಉಚಿತ ಸಾರಿಗೆ ಸೇವೆ….!!
ಉಡುಪಿ ಮೇ.24: ಲಾಕ್ ಡೌನ್ 4.0 ದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ಇದ್ದರೂ ಖಾಸಗಿ ಬಸ್ ಮಾಲಕರು ಬಸ್ ಸಂಚಾರ ಆರಂಭಿಸಲು ಮೀನಮೇಷ ಏಣಿಸಿದ ಹಿನ್ನಲೆ ಉಡುಪಿ ಶಾಸಕ ರಘುಪತಿ ಭಟ್ ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಉಚಿತ ಸಾರಿಗೆ ಸೇವೆ ನೀಡಲು ಮುಂದಾಗಿದ್ದಾರೆ. ತಮ್ಮ ಆಸರೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಬಸ್ ಸೇವೆ ಆರಂಭಿಸಲಿದ್ದಾರೆ.
ಈ ಉಚಿತ ಸೇವೆ ಪಡೆಯಲು ಚಲೋ ಟ್ರಾವೆಲ್ಲ್ ಕಾರ್ಡ್ ನ್ನು ಪ್ರತಿ ಪ್ರಯಾಣಿಕರಿಗೂ ನೀಡಲಾಗುವುದು ಅದನ್ನು ಬಳಿ ಪ್ರಯಾಣಿಕರು ಟಿಕೇಟಿಂಗ್ ಮೆಷಿನ್ ಮೇಲೆ ಇಟ್ಟು, ನಿರ್ವಾಹಕರ ಬಳಿ ಟಿಕೆಟ್ ಪಡೆಯುವ ವ್ಯವಸ್ಥೆ ಇದಾಗಿದ್ದು ಇದಕ್ಕಾಗಿ ಯಾವುದೇ ಹಣದ ವ್ಯವಹಾರ ಇಲ್ಲದೆ ಬಸ್ ಪ್ರಯಾಣ ಸೇವೆ ಲಭ್ಯವಿದೆ.
ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಉಚಿತ ಬಸ್ ಸೇವೆ ಆರಂಭವಾಗಿದ್ದು, ಉಡುಪಿ ಶಾಸಕ ಮತ್ತು ಜಿಲ್ಲಾಧಿಕಾರಿಗಳ ಮೂಲಕ ವಿನೂತನ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ಪ್ರಾಯೋಗಿಕವಾಗಿ ಹೂಡೆ – ತೊಟ್ಟಂ -ಮಲ್ಪೆ -ಉಡುಪಿ -ಮಣಿಪಾಲ -ಪರ್ಕಳ, ಹೂಡೆ – ಕೆಮ್ಮಣ್ಣು -ಸಂತೆಕಟ್ಟೆ – ಅಂಬಾಗಿಲು – ಗುಂಡಿಬೈಲು – ಕಲ್ಸoಕ -ಉಡುಪಿ, ಸಂಪಿಗೆನಗರ -ಕಡೆಕಾರ್ -ಅಂಬಲಪಾಡಿ -ಉಡುಪಿ- ಮಣಿಪಾಲ -ಪರ್ಕಳ , ಅಲೆವೂರು -ಕೊರಂಗ್ರಪಾಡಿ – ಉಡುಪಿ ಮಣಿಪಾಲ -ರಜತಾದ್ರಿ, ಉಡುಪಿ ಡಯಾನಾ ಅಲೆವೂರು, ಪ್ರಗತಿನಗರ ಮಣಿಪಾಲ ಉಡುಪಿ ಕಲ್ಸoಕ ಗುಂಡಿಬೈಲ್ ದೊಡ್ಡಣಗುಡ್ಡೆ ಪೆರಂಪಳ್ಳಿ ಚರ್ಚ್ ಮಾರ್ಗಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶವನ್ನು ಬಸ್ ಮಾಲಕರ ಸಂಘ ನೀಡಿದೆ.