Connect with us

    KARNATAKA

    ಉಡುಪಿ : ಸುಡುಬಿಸಿಲಲ್ಲೂ ಪರ್ಕಳ ಪರಿಸರದ ಬಾವಿಗಳಲ್ಲಿ ಉಕ್ಕಿ ಹರಿಯುವ ನೀರು,ಪ್ರಕೃತಿಯ ಕೌತುಕಕ್ಕೆ ಜನ ನಿಬ್ಬೆರಗು..!

    ಉಡುಪಿ : ಸುಡು ಬೇಸಿಗೆ ಜೀವಿಗಳ ಬದುಕು ಹಿಂಡುತ್ತಿದ್ದರೆ ಎಲ್ಲೆಡೆ ಕುಡಿಯುವ ನೀರಿಗೆ ಅಹಕಾರ ಉಂಟಾಗಿದೆ. ಆದ್ರೆ ಈ ಸುಡು ಬೇಸಿಗೆಯಲ್ಲೂ ಉಡುಪಿ ಪರ್ಕಳ ಪರಿಸರದ ಮನೆಗಳ ಬಾವಿಗಳಲ್ಲಿ ಶುದ್ದ ನೀರು ಉಕ್ಕಿ ಹರಿಯುತ್ತಿದೆ.

    ಬಾವಿಗಳಲ್ಲಿ ಹೆಚ್ಚಿದ್ದ ನೀರು ಸಮೀಪದ ತೋಡಿನಲ್ಲಿ ಹರಿಯುತ್ತಿದ್ದು ಸ್ಥಳೀಯರನ್ನು ನಿಬ್ಬೆರೆಗುಗೊಳಿಸಿದೆ. ಏಳು ವರ್ಷಗಳ ಹಿಂದೆ ಜನವರಿ ತಿಂಗಳಿನಲ್ಲಿ ಕರಾವಳಿ ಭಾಗದಲ್ಲಿ ಲಘು ಭೂಕಂಪ ಆಗಿದ್ದು, ನಂತರ 2017 ಮತ್ತು 2018ರಲ್ಲಿ ಪರ್ಕಳ ಪ್ರದೇಶದ ಈ ಭಾಗದಲ್ಲಿ ಬಾವಿಗಳ ನೀರು ಉಕ್ಕಿ ಹರಿಯುತ್ತಿದೆ. ನಂತರದ ವರ್ಷದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಈಗ ಮತ್ತೆ ಪರ್ಕಳದ ಗರಡಿ ಬಳಿಯ ಮರಾಠಿರು ಪೂಜಿಸುವ ಭವಾನಿ ಕಟ್ಟೆಯ ಬಳಿ ಶ್ರೀಸತ್ಯಮತ ನಿಲಯದ ಬಾವಿಯಲ್ಲಿ ನೀರು ಉಕ್ಕಿ ಪಕ್ಕದಲ್ಲಿರುವ ಮಳೆ ನೀರು ಹೋಗುವ ತೋಡಿನಲ್ಲಿ ಹರಿಯುತ್ತಿದೆ. ಈ ಮನೆಯ ಬಾವಿಗೆ ಮೂರು ವಿದ್ಯುತ್ ಎಲೆಕ್ಟ್ರಾನಿಕ್ ಪಂಪುಗಳನ್ನು ಅಳವಡಿಸಲಾಗಿದ್ದು, ಮೂರು ಮನೆಯವರು ದಿನನಿತ್ಯ ನೀರು ತೆಗೆಯುತ್ತಿದ್ದಾರೆ. ಹಾಗೆ ವಾರಕ್ಕೊಮ್ಮೆ ಸೀಮೆಎಣ್ಣೆ ಪಂಪಿನ ಮೂಲಕವೂ ನೀರನ್ನು ತೋಟಕ್ಕೆ ಹಾಯಿಸುತ್ತಾರೆ. ಆದರೂ ಕೂಡ ನೀರು ಉಕ್ಕಿ ಬರುತ್ತಿರುವುದು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ. ಬಾವಿಯ ಪಕ್ಕದಲ್ಲಿ ರಂಧ್ರವಿದ್ದು, ಆ ಮೂಲಕ ನೀರು ಉಕ್ಕಿ ತೋಡಿನಲ್ಲಿ ಹರಿಯುತ್ತಿದೆ. ಈ ಪರಿಸರದಲ್ಲಿ ಅಪ್ರಾಯ ನಾಯ್ಕ ಎಂಬವರ ಮನೆಯ ಎದುರು ಬಾವಿಯಲ್ಲೂ ನೀರು ತುಂಬಿದೆ. ಹಾಗೆಯೇ ಪ್ರಜ್ವಲ್ ಪೂಜಾರಿ, ಏಕನಾಥ ನಾಯ್ಕ್, ದೇವೇಂದ್ರ ನಾಯ್ಕ್ ಮೊದಲಾದವರ ಮನೆಯ ಎದುರು ಮತ್ತು ಅಂಗಳದಲ್ಲಿರುವ ಬಾವಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿರುವುದು ಕಂಡುಬಂದಿದೆ. ಏಳು ವರ್ಷಗಳ ಹಿಂದೆ ಭೂ ವಿಜ್ಞಾನಿಗಳು ಈ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಭಾಗದಲ್ಲಿ ಮುರಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಭೂಕಂಪನದಿಂದ ಇಬ್ಭಾಗವಾಗಿ ಈ ಪರಿಸರದಲ್ಲಿ ನೀರು ಹರಿಯ ಲಾರಂಭಿಸಿದೆ ಎಂದು ತಿಳಿಸಿದ್ದರು. ಇದೀಗ ಮತ್ತೆ ಈ ಕೌತುಕ ಸ್ಥಳೀಯ ಜನರನ್ನು ನಿಬ್ಬೆರಗುಗೊಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply