DAKSHINA KANNADA
ಬಿಜೆಪಿ ಮುಖಂಡ ಆರ್.ಸಿ. ನಾರಾಯಣ್ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ವಾಟ್ಸ್ ಅಪ್ ಗ್ರೂಪ್ ಗೆ ಸೇರಿಸಿ ಸೋಶಿಯಲ್ ಮಿಡಿಯಾದಲ್ಲಿ ಸ್ಕ್ರೀನ್ ಶಾಟ್ ವೈರಲ್
ಪುತ್ತೂರು ಎಪ್ರಿಲ್ 09: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ್ ಅವರನ್ನು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ವಾಟ್ಸ್ ಅಪ್ ಗ್ರೂಪ್ ಗೆ ಸೇರಿಸಿ ಬಳಿಕ ಅದರ ಸ್ಕ್ರೀನ್ ಶಾಟ್ ನ್ನು ಸಾಮಾಜಿಕ ಜಾಲತಾಣಜದಲ್ಲಿ ವೈರಲ್ ಮಾಡಲಾಗಿದೆ.
ಆರ್.ಸಿ.ನಾರಾಯಣ್ ಅವರ ಮೊಬೈಲ್ ಸಂಖ್ಯೆಯನ್ನು ಉದ್ಧೇಶಪೂರ್ವಕವಾಗಿ ಪದ್ಮರಾಜ ಪರಿವಾರ ಪುತ್ತೂರು ಹೆಸರಿನ ವಾಟ್ಸ್ ಅಪ್ ಗ್ರೂಪ್ ಗೆ ಸೇರಿಸಿ ಬಳಿಕ ಗ್ರೂಪ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಈ ಬಗ್ಗೆ ವಾಟ್ಸಪ್ ಗ್ರೂಪ್ ಅಡ್ಮಿನ್ ವಿರುದ್ಧ ಸೈಬರ್ ಸೆಲ್ ಪೋಲೀಸರಿಗೆ ಆರ್.ಸಿ.ನಾರಾಯಣ್ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಉದ್ದೇಶಪೂರ್ವಕವಾಗಿ ನನ್ನ ತೇಜೋವಧೆ ಮಾಡಲಾಗುತ್ತಿದ್ದು, ಕಳೆದ 36 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದಿದ್ಧೇನೆ.
ನಾರಾಯಣ ಗುರು ಆದರ್ಶವನ್ನು ಪಾಲಿಸಿಕೊಂಡು ಬಂದಿದ್ದೇನೆ. ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನನ್ನಂತವನನ್ನು ಜಾತಿಯ ಹೆಸರಿನಲ್ಲಿ ಸಿಲುಕಿಸುವ ಪ್ರಯತ್ನ ಈ ಮೂಲಕ ಮಾಡಲಾಗಿದೆ. ಈ ಷಡ್ಯಂತ್ರ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸುತ್ತಿದ್ಧೇನೆ ಎಂದು ಆರ್.ಸಿ.ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.