LATEST NEWS
ಪ್ರಮೋದ್ ಮಧ್ವರಾಜ್ ಗೆ ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೇಸ್
ಪ್ರಮೋದ್ ಮಧ್ವರಾಜ್ ಗೆ ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೇಸ್
ಉಡುಪಿ ಎಪ್ರಿಲ್ 4: ಉಡುಪಿಯಲ್ಲಿ ಭಾರಿ ಕುತೂಹಲ ಮೂಡಿಸಿರುವ ಕಾಂಗ್ರೇಸ್ ಶಾಸಕ ಪ್ರಮೋದ್ ಮಧ್ವರಾಜ್ ಅವರ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಬಾರಿ ಕಾಂಗ್ರೇಸ್ ಪಕ್ಷದಿಂದ ಈ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಪ್ರಮೋದ್ ಮಧ್ವರಾಜ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.
ಪ್ರಮೋದ್ ಮದ್ವರಾಜ್ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೆ ಅನ್ನುವುದರ ಬಗ್ಗೆ ಈಗ ಕೈ ಪಾಳಯದ ಹಿರಿಯ ನಾಯಕರಿಗೆ ಅನುಮಾನ ಕಾಡಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಪ್ರಮೋದ್ ಬಿಜೆಪಿ ಕಡೆ ಪಲಾಯನ ಮಾಡಿದ್ರೆ ಕಾಂಗ್ರೇಸ್ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಸ್ಫರ್ಧಿಸಲು ಅಭ್ಯರ್ಥಿಯನ್ನು ಕಾಂಗ್ರೇಸ್ ನ ಹಿರಿಯ ನಾಯಕರು ತೆರೆಯ ಮರೆಯಲ್ಲಿ ರೆಡಿ ಮಾಡುತ್ತಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.
ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುತ್ತಿದಂತೆ ಪ್ರಮೋದ್ ಮದ್ವರಾಜ್ ಕೈಪಾಳಯಕ್ಕೆ ಕೈ ಕೊಟ್ಟುಬಿಜೆಪಿ ಕಡೆ ಮುಖಮಾಡಿದ್ರೆ ಪ್ರಮೋದ್ ಮದ್ವರಾಜ್ ಗೆ ಪ್ರಬಲ ಸ್ಪರ್ಧಿಯನ್ನು ಸ್ಫರ್ಧೆ ಇಳಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಹಿರಿಯ ನಾಯಕರೊಬ್ಬರ ಯೋಜನೆ ಯಂತೆ ಮಾಜಿ ಶಾಸಕ ಯು ಆರ್ ಸಭಾಪತಿಯವರಿಗೆ ಕಾಂಗ್ರೇಸ್ ಟಿಕೆಟ್ ನೀಡುವುದಕ್ಕೆ ತೆರೆಯ ಮರೆಯಲ್ಲಿ ತಯಾರಿ ನಡೆಸುತ್ತಿದೆ.
ಯು.ಆರ್ ಸಭಾಪತಿ ರಾಜಕೀಯ ರಂಗದ ಮರುಪ್ರವೇಶದ ಸಿದ್ದತೆಯಲ್ಲಿ ತೋಡಗಿದ್ದು ಈ ಹಿನ್ನಲೆಯಲ್ಲಿ ಉಡುಪಿಯ ಹಲವು ಉದ್ಯಮಿಗಳ ಭೇಟಿ ಮಾಡಿ ಬೆಂಬಲ ಯಾಚಿಸಿರುವುದು ಗುಟ್ಟಾಗಿ ಉಳಿದಿಲ್ಲ. ಉಡುಪಿ ವಿಧಾನ ಸಭಾ ಕ್ಷೇತ್ರದ ರಾಜಕೀಯ ಚದುರಂಗದ ಪ್ರಮೋದ್ ಮದ್ವರಾಜ್ ದಾಳ ಹೇಗೆ ನಡೆಸುತ್ತಾರೆ ನೋಡಿಕೊಂಡು ಕಾಂಗ್ರೇಸ್ ಹಿರಿಯ ನಾಯಕರು ತಮ್ಮ ದಾಳ ಉರುಳಿಸುವುದಕ್ಕೆ ಕಾಯುತ್ತಿದ್ದಾರೆ ಅನ್ನುವ ಮಾತು ಬೆಳಕಿಗೆ ಬಂದಿದೆ.
ಯು ಆರ್ ಸಭಾಪತಿ ಅವರಿಗೆ ಟಿಕೆಟ್ ನೀಡುವ ಭರವಸೆ ಕರಾವಳಿ ಕಾಂಗ್ರೆಸ್ ಹಿರಿಯಣ್ಣ ನೇ ತನ್ನ ಹೊಸ ಬಲಗೈಬಂಟನಿಗೆ ಬೆಂಬಲವಾಗಿ ಮಾಡುತ್ತಿದ್ದಾರೆ ಅನ್ನುವ ಮಾತು ರಾಜಕೀಯ ವಲಯದಲ್ಲಿ ಗುಲ್ಲು ಎಬ್ಬಿಸಿದೆ.
You must be logged in to post a comment Login