LATEST NEWS
ಉಡುಪಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿಧ್ಯಾರ್ಥಿನಿ ಸೇರಿದಂತೆ 40 ಮಂದಿಗೆ ಕೊರೊನಾ
ಉಡುಪಿ ಜೂನ್ 28: ಉಡುಪಿ ಜಿಲ್ಲೆಯಲ್ಲಿ ಇಂದು 40 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. 15 ಜನ ಮಹಾರಾಷ್ಟ್ರ, 2 ಬೆಂಗಳೂರು, 1 ಬಾಗಲಕೋಟೆಯಿಂದ ಆಗಮಿಸಿದವರಾಗಿದ್ದಾರೆ. ಇನ್ನು 6 ಮಂದಿ ಕೊರೊನಾ ವಾರಿಯರ್ಸ್ಗೆ ಕೊರೊನಾ ಸೊಂಕು ತಗುಲಿದ್ದೆ. ಅಲ್ಲದೆ 16 ಪ್ರಕರಣಗಳು ಕೊರೊನಾ ಸೊಂಕಿತರ ಪ್ರಾರ್ಥಮಿಕ ಸಂಪರ್ಕದಿಂದ ತಗುಲಿದೆ.
ಕಾಪು ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಜೂನ್ 25ರ ಎಸ್.ಎಸ್.ಎಲ್.ಸಿಯ ಕನ್ನಡ ಹಾಗೂ ಜೂನ್ 27ರಂದು ನಡೆದ ಗಣಿತ ಪರೀಕ್ಷೆ ಬರೆದಿದ್ದರು. ಜೂನ್ 27ರಂದು ಈಕೆಯ ತಂದೆಯ ಗಂಟಲು ದ್ರವದ ಮಾದರಿ ಪರೀಕ್ಷೆ ಬಂದ ಹಿನ್ನೆಲೆ ಈಕೆಯನ್ನು ಕೂಡಾ ಅದೇ ದಿನ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.
ಕೊರೊನಾ ಪರೀಕ್ಷಾ ವರದಿ ಬಂದಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಖಚಿತವಾಗಿತ್ತು. ಈ ಕಾರಣದಿಂದ ವಿದ್ಯಾರ್ಥಿನಿ ಜೂನ್ 29ರಂದು ನಡೆಯಲಿರುವ ಪರೀಕ್ಷೆಯ ಅವಕಾಶದಿಂದ ವಂಚಿತರಾಗಿದ್ದಾರೆ. ಅವರು ಸೆಪ್ಲಿಮೆಂಟರಿ ಪರಿಕ್ಷೆಗೆ ಬರೆಯಲು ಅವಕಾಶ ಇದೆ.
ಈಕೆ ಪರೀಕ್ಷೆ ಬರೆದ ಕೇಂದ್ರದಲ್ಲಿ ಸ್ಯಾನಿಟೈಸ್ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಇವರೆಗೆ ಒಟ್ಟು 1179 ಕೊರೊನಾ ಪ್ರಕರಣ ದಾಖಲಾಗಿದೆ. ಅದರಲ್ಲಿ 1053 ಪ್ರಕರಣ ಗುಣಮುಖ. ಸದ್ಯ 126 ಕೊರೊನಾ ಸೊಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://youtu.be/21K8B3aTCpY