Connect with us

    LATEST NEWS

    ಕಡಲ ಮಧ್ಯೆ ಸಿಲುಕಿದ್ದ ಯುವಕನನ್ನು ಪ್ರಾಣ ಒತ್ತೆ ಇಟ್ಟು ರಕ್ಷಿಸಿದ ಸ್ಥಳೀಯರು

    ಮಂಗಳೂರು ಜೂನ್ 28: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ನಡುವೆ ಸಮುದ್ರದಲ್ಲಿ ಈಜಾಡಲು ತೆರಳಿ ಕಡಲ ಮಧ್ಯೆ ಸಿಲುಕಿಕೊಂಡಿದ್ದ ಯುವಕನ್ನು ಗುಡ್ಡಕೊಪ್ಪ ಸ್ಥಳೀಯರು ರಕ್ಷಿಸಿದ್ದಾರೆ.


    ಸುರತ್ಕಲ್ ಸಮೀಪದ ಗುಡ್ಡಕೊಪ್ಪ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ ಬಂದ 6 ಮಂದಿ ಯುವಕರ ತಂಡ ಸ್ಥಳೀಯ ಮೊಗವೀರರು ಎಚ್ಚರಿಕೆಗೂ ಗಮನ ಕೊಡದೆ ಕಡಲಲ್ಲಿ ಈಜಾಡಲು ತೆರಳಿದ್ದಾರೆ. ಆದರೆ ಭಾರಿ ಮಳೆ ಪ್ರಕ್ಷುಬ್ದಗೊಂಡಿರುವ ಕಡಲು ತಂಡದಲ್ಲಿದ್ದ ಯುವಕನೊಬ್ಬ ಸಮದ್ರದ ಅಲೆಗೆ ಸಿಲುಕಿ ಅವನನ್ನು ಕಡಲ ಮದ್ಯದಲ್ಲಿ ಮುಳುಗಿದ್ದ ಡ್ರಜ್ಜರ್ ಕಡೆಗೆ ಎಳೆದುಕೊಂಡು ಹೋಗಿದೆ.


    ಯುವಕ ಡ್ರಜ್ಜರನ್ನು ಹಿಡಿದು ಸಹಾಯಕ್ಕೆ ಅಂಗಲಾಚುತ್ತಿದ್ದಾಗ, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಲಿ ಕರಾವಳಿ ರಕ್ಷಣಾ ಪಡೆಗಾಗಲಿ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ರಕ್ಷಿಸಲು ಅಸಾಧ್ಯವಾದಾಗ ಸ್ಥಳೀಯ ವೀರಮೊಗವೀರ ಯುವಕರಾದ ಯಾದವ ಶ್ರೀಯಾನ್ ಮತ್ತು ಸುಮನ್ ರವರು ಈಜುತ್ತಾ ಡ್ರಜರ್ ಕಡೆಗೆ ಹೋಗಿ ಯುವಕನನ್ನು ಹಿಡಿದು ದಡಕ್ಕೆ ತಲುಪಿಸಿ ಬದುಕಿಸಿ ಸಾಹಸ ಮೆರೆದಿದ್ದಾರೆ. ಯುವಕರ ಜೀವ ಉಳಿಸಿದ್ದಾರೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply