Connect with us

    LATEST NEWS

    ಉದಯದಲ್ಲಿ ಶಿವ- ದಿಗಂತದಲ್ಲಿ ವಿನಾಯಕ

    ಉದಯದಲ್ಲಿ ಶಿವ- ದಿಗಂತದಲ್ಲಿ ವಿನಾಯಕ

    ಕರಾವಳಿ ಕನ್ನಡದ ಎರಡು ಪತ್ರಿಕೆಗಳಿಗೆ  ಕರಾವಳಿ ಮೂಲದ ಪತ್ರಕರ್ತರ ಸಾರಥ್ಯ

    ಬೆಂಗಳೂರು,ಡಿಸೆಂಬರ್ 15: ಕರಾವಳಿ ಕೇಂದ್ರವಾಗಿರುವ ಎರಡು ಪ್ರಮುಖ ಪತ್ರಿಕೆಗಳಿಗೆ ಇಬ್ಬರು ಕರಾವಳಿ ಮೂಲದ ಪತ್ರಕರ್ತರು ಸಾರಥ್ಯ ಸಾರಥ್ಯ ವಹಿಸುತ್ತಿದ್ದಾರೆ.

    ಜನಮನದ ಜೀವನಾಡಿ ಉದಯವಾಣಿ ಪತ್ರಿಕೆಯ ಸಂಪಾದಕ ಸ್ಥಾನವನ್ನು ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಅವರು ವಹಿಸುತ್ತಿದ್ದಾರೆ.

    ರಾಷ್ಟ್ರ ಜಾಗೃತ ದೈನಿಕ ಹೊಸದಿಗಂತಕ್ಕೆ ಹಿರಿಯ ಹಾಗೂ ಯುವ ಪತ್ರಕರ್ತ ವಿನಾಯಕ್ ಭಟ್ ಮೂರೂರು  ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಉದಯವಾಣಿ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡಿರುವ ಶಿವಸುಬ್ರಹ್ಮಣ್ಯ ಅವರು ಹೊಸದಿಗಂತ ಪತ್ರಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

    ಅವರು ದ.ಕ. ಜಿಲ್ಲೆಯ ಸುಳ್ಯ ಮೂಲದವರು. ಹೊಸದಿಗಂತ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ ಪತ್ರಿಕೆಗೆ ತನ್ನದೇ ಆದ ಕೊಡುಗೆ ನೀಡಿದವರು.

    ಮುಂಗಾರು ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ ಶಿವಸುಬ್ರಹ್ಮಣ್ಯ ಅವರು ಹೊಸದಿಗಂತ, ಉದಯವಾಣಿ, ಸಂಯುಕ್ತ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

    ಕನ್ನಡ ಪ್ರಭದಲ್ಲಿ ಸಂಪಾದಕರಾಗಿದ್ದ ವೇಳೆ ಹಲವು ಸವಾಲುಗಳನ್ನು ಎದುರಿಸಿದ್ದರು. ಎಲ್ಲದಕ್ಕೂ ಮೀರಿ ಪತ್ರಿಕೆಯ ಗಾಂಭೀರ್ಯ, ಸ್ವಾದ ಹಾಗೇ ಉಳಿಸಿಕೊಂಡವರು.

    ಕನ್ನಡ ಪ್ರಭದ ನಂತರ ಕೆಲ ಸಮಯದ ಬಳಿಕ ಹೊಸದಿಗಂತದ ಸಂಪಾದಕರಾಗಿದ್ದರು.

    ಹೊಸದಿಗಂತ ಪತ್ರಿಕೆಯ ಸಂಪಾದಕರಾಗಿ ಅಧಿಕಾರ ಸ್ವೀಕರಿಸಿದ್ದ ವಿನಾಯಕ್ ಭಟ್ ಮೂರೂರು ಅವರು ಈವರೆಗೆ ವಿಶ್ವವಾಣಿ ಪತ್ರಿಕೆಯಲ್ಲಿದ್ದವರು.

    ಉತ್ತರ ಕನ್ನಡ ಜಿಲ್ಲೆಯ ಕುಮುಟದವರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಇವರು ವೃತ್ತಿ ಆರಂಭಿಸಿದ್ದು ವಿಜಯ ಕರ್ನಾಟಕದಲ್ಲಿ.

    ಅದರಲ್ಲೂ ಮಂಗಳೂರಿನಲ್ಲಿ ಸಾಹಿತ್ಯ,ಕ್ರೈಂ ಸುದ್ದಿಗಳೆರಡರಲ್ಲೂ ಅವರು ಎತ್ತಿದ್ದ ಕೈ, ನೇರ ನಡೆನುಡಿ ಮತ್ತು ಬರವಣಿಗೆಗೆ ಅವರು ಚಿರಪರಿಚಿತರು.

    ನಂತರ ದೆಹಲಿಯಲ್ಲಿ ವಿಜಯ ಕರ್ನಾಟದ ಪ್ರತಿನಿಧಿಯಾಗಿ ಕೆಲಸ ಮಾಡಿದ ನಂತರ ಕನ್ನಡ ಪ್ರಭದಲ್ಲೂ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

    ಬಳಿಕ ವಿಶ್ವವಾಣಿಯ ಸಹ ಸಂಪಾದಕರಾಗಿ ಕೆಲಸ ಮಾಡಿದ್ದರು. ರಾಜಕೀಯ, ಪ್ರಚಲಿತ ವಿದ್ಯಮಾನ, ಭದ್ರತೆ, ಧರ್ಮ ಹೀಗೆ ಇವರ ವಿಷಯಗಳುಹತ್ತು ಹಲವು.  ತಮ್ಮ ಅಂಕಣಗಳ ಮೂಲಕ ವಿನಾಯಕ್ ಭಟ್ ಅವರು ಪ್ರಸಿದ್ಧಿ ಪಡೆದಿದ್ದಾರೆ.

    ಒಟ್ಟಿನಲ್ಲಿ ಇಬ್ಬರು ಕರಾವಳಿ ಮೂಲದ ಮಂದಿ ಕನ್ನಡದ  ಎರಡು ಪ್ರಮುಖ ಪತ್ರಿಕೆಗಳ ಸಾರಥ್ಯ ವಹಿಸಿಕೊಂಡಿರುವುದು ಕರಾವಳಿಯ ಪತ್ರಿಕಾವಲಯಕ್ಕೆ ಹೆಮ್ಮೆಯ ಸಂಗತಿ.

    Share Information
    Advertisement
    Click to comment

    You must be logged in to post a comment Login

    Leave a Reply