Connect with us

  LATEST NEWS

  ಗುಡ್ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ – ಮೇ 31ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ

  ನವದೆಹಲಿ ಮೇ 15: ಮುಂಗಾರು ಪೂರ್ವ ಮಳೆ ಅಬ್ಬರದ ಜೊತೆಗೆ ಇದೀಗ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು ಮೇ 31ಕ್ಕೆ ಕೇರಳಕ್ಕೆ ಮುಂಗಾರು ಮಳೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.


  ಈ ವರ್ಷ, ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳಕ್ಕೆ ಬರುವ ಸಾಧ್ಯತೆ ಇದ್ದು, ನಾಲ್ಕು ದಿನಗಳಲ ಹೆಚ್ಚು ಅಥವಾ ಕಮ್ಮಿಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ. ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗುತ್ತದೆ. ಈ ಬಾರಿಯೂ ವಾಡಿಕೆಯ ದಿನಾಂಕದ ಸಮೀಪದಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.

  Share Information
  Advertisement
  Click to comment

  You must be logged in to post a comment Login

  Leave a Reply