Connect with us

    LATEST NEWS

    ಕೊಟಾ ಮೂರ್ಕೈ ಬಳಿ ಲಾರಿ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಇಬ್ಬರ ಸಾವು

    ಲಾರಿ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಇಬ್ಬರ ಸಾವು

    ಉಡುಪಿ ಡಿಸೆಂಬರ್ 12: ಲಾರಿ ಹಾಗೂ ಆಲ್ಟೋ ಕಾರ್ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ಕೋಟ ಮೂರ್ಕೈ ಎಂಬಲ್ಲಿ ನಡೆದಿದೆ.

    ಬಾರಕೂರಿನ ಬೆಣ್ಣೆ ಕುದ್ರು ನಿವಾಸಿಗಳಾದ ಅವಿನಾಶ್ ಹಾಗೂ ಕಸ್ತೂರಿ ಎಂಬವರು ಸಾವನಪ್ಪಿದ್ದ ದುರ್ದೈವಿಗಳು. ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕೋಟಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕೊಟಾ ಮೂರ್ಕೈ ಬಳಿ ಕಾರು ಚಾಲಕನ ನಿಯಂತ್ರಣ ಡಿವೈಡರ್ ದಾಟಿ ಕೋಟಾದಿಂದ ಉಡುಪಿ ಕಡೇ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ಕರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅತೀಯಾದ ವೇಗವೇ ಅಫಘಾತಕ್ಕೆ ಕಾರಣ ಎನ್ನಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    Share Information
    Advertisement
    Click to comment

    You must be logged in to post a comment Login

    Leave a Reply