LATEST NEWS
ನಿಲ್ಲಿಸಿದ್ದ ಕಾರಿನೊಳಗೆ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು

ತೆಲಂಗಾಣ, ಏಪ್ರಿಲ್ 15: ಜಿಲ್ಲೆಯ ರಂಗಾರೆಡ್ಡಿಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ದಾಮರಗಿರಿ ಗ್ರಾಮದಲ್ಲಿ ಸೋಮವಾರ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಕಾರಿನೊಳಗೆ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮೃತ ಮಕ್ಕಳನ್ನು ತನು ಶ್ರೀ (4) ಮತ್ತು ಅಭಿನೇತ್ರಿ (5) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸಾಂಧರ್ಬಿಕ ಚಿತ್ರ
ಪೊಲೀಸರ ಪ್ರಕಾರ, ಮೃತ ಇಬ್ಬರು ಮಕ್ಕಳ ಪೋಷಕರು ತಮ್ಮ ಸಂಬಂಧಿಕರ ಮದುವೆಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ತಮ್ಮ ಅಜ್ಜಿಯ ಮನೆಗೆ ಬಂದಿದ್ದರು. ಮನೆಯಲ್ಲಿ ಚರ್ಚೆಯ ಸಮಯದಲ್ಲಿ ಮಕ್ಕಳಾದ ತನು ಶ್ರೀ (4) ಮತ್ತು ಅಭಿನೇತ್ರಿ (5) ಹೊರಗೆ ಹೋಗಿ ಕಾರಿನ ಬಾಗಿಲು ತೆರೆದು ಯಾರ ಗಮನಕ್ಕೂ ಬಾರದಂತೆ ವಾಹನದೊಳಗೆ ಕುಳಿತರು. ನಿಲ್ಲಿಸಿದ್ದ ಕಾರಿನೊಳಗೆ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವನ್ನಪ್ಪಿದರು.
