Connect with us

    LATEST NEWS

    ಟ್ವಿಟರ್ ನಲ್ಲಿ ಮುಂದುವರೆದ ಜಗ್ಗೇಶ್ ಹಾಗೂ ಪ್ರಕಾಶ್ ರೈ ಜಗಳ

    ಟ್ವಿಟರ್ ನಲ್ಲಿ ಮುಂದುವರೆದ ಜಗ್ಗೇಶ್ ಹಾಗೂ ಪ್ರಕಾಶ್ ರೈ ಜಗಳ

    ಬೆಂಗಳೂರು ಫೆಬ್ರವರಿ 19: ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಖ್ಯಾತ ನಟ ಪ್ರಕಾಶ್ ರೈ ಅವರು ಪ್ರಧಾನಿ ನರೇಂದ್ರ ಮೋದಿಗೆ ದೇಶ ಆಳುವ ಅರ್ಹತೆ ಇಲ್ಲ ಎಂದು ಆರೋಪಿಸಿದ್ದರು.

    ನಂತರ ಟ್ವೀಟರ್ ನಲ್ಲಿ ಪ್ರಕಾಶ್ ರೈ ಈ ಹೇಳಿಕೆ ವಿರುದ್ದ ಹಲವರು ಗರಂ ಆಗಿದ್ದು, ಪ್ರಕಾಶ್ ರೈ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಮುಖಂಡ ಹಿರಿಯ ನಟ ಜಗ್ಗೇಶ್ ಟ್ವೀಟರ್ ನಲ್ಲಿ ಪ್ರಕಾಶ್ ರೈ ಗೆ ಸರಿಯಾಗಿ ಟಾಂಗ್ ನೀಡಿದ್ದರು.

    ಗಂಡಸ್ಸುತನ ಇದ್ದರೆ ಚುನಾವಣೆಗೆ ನಿಂತು ತೋರಿಸಿ ಎಂದು ಪ್ರಕಾಶ್ ರೈ ಗೆ ಸವಾಲನ್ನು ಹಾಕಿ ಟ್ವೀಟ್ ಮಾಡಿದ್ದರು.
    ಜಗ್ಗೇಶ್ ಅವರ ಗಂಡಸ್ಸುತನ ಎಂಬ ಹೇಳಿಕೆ ಹಲವರು ವಿರೋಧ ವ್ಯಕ್ತಪಡಿಸಿ ಟ್ಟೀಟ್ ಕೂಡ ಮಾಡಿದ್ದರು, ಪ್ರಕಾಶ್ ರೈ ಕೂಡ ಟ್ವೀಟ್ ಮಾಡಿ ಜಗ್ಗೇಶ್ ಟ್ಲೀಟ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೂಡ ನೀಡಿದ್ದರು.

    ಮತ್ತೆ ಇಂದು ಜಗ್ಗೇಶ್ ಗಂಡಸ್ಸುತನ ಹೇಳಿಕೆಗೆ ಟ್ವೀಟ್ ಮಾಡದ ಪ್ರಕಾಶ್ ರೈ
    ” @Jaggesh2 ..ರವರೆ….ಭಿನ್ನಾಭಿಪ್ರಾಯಗಳೋಂದಿಗೆ ಚರ್ಚಿಸಬೇಕೆ ಹೋರತು…ನಿಮ್ಮಿಂದ ಇಂತಹ ಕೀಳು ಅಭಿರುಚಿಯ ಮಾತುಗಳು ..ಖಂಡನೀಯ. ಎಲ್ಲರ ಮನಃಸಾಕ್ಶಿ…ಕನ್ನಡದ ಸಭ್ಯ ಸಮಾಜ ..ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ… ನಿಮಗೋಂದು ದೋಡ್ಡ ನಮಸ್ಕಾರ… ” ಎಂದು ಟ್ವೀಟ್ ಮಾಡಿದ್ದಾರೆ.

     

     

    Share Information
    Advertisement
    Click to comment

    Leave a Reply

    Your email address will not be published. Required fields are marked *