LATEST NEWS
ಅಮಿತ್ ಶಾ ಭಯಕ್ಕೆ ಗುಹೆ ಸೇರುತ್ತಿರುವ ಕಾಂಗ್ರೇಸ್ ಹುಲಿಗಳು
ಅಮಿತ್ ಶಾ ಭಯಕ್ಕೆ ಗುಹೆ ಸೇರುತ್ತಿರುವ ಕಾಂಗ್ರೇಸ್ ಹುಲಿಗಳು
ಮಂಗಳೂರು ಫೆಬ್ರವರಿ 18: ಅಮಿತ್ ಶಾ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಕಾಂಗ್ರೇಸ್ ಹುಲಿಗಳು ಭಯದಿಂದ ಗುಹೆ ಸೇರುತ್ತಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಮಿತ್ ಶಾ ಬಂದರೆ ಗಲಭೆಯಾಗುತ್ತದೆ ಎಂಬ ಕಾಂಗ್ರೇಸ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಬಂದರೆ ಗಲಭೆಯಾಗುವುದಿಲ್ಲ ಆದರೆ ನಿಮ್ಮ ಮುಖ್ಯಮಂತ್ರಿ ಎಲ್ಲೆಲ್ಲಿ ಹೋಗುತ್ತಿದ್ದಾರೆ ಅಲ್ಲಿ ಹತ್ಯೆಗಳಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿ ಹೋದ ಬಳಿಕ ಕೋಮುಗಲಭೆಗಳು ನಡೆದ ನಿದರ್ಶನ ಗಳಿವೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ವಿರೋಧಿ ಅಲೆ ರಾಜ್ಯದಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹಾಗು ಸಚಿವ ಯು.ಟಿ.ಖಾದರ್ ಅಸಂಭಧ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ದೂರಿದರು. ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಆಡಳಿತ ಮಾಡಿದೆ ಆಗೆಲ್ಲಾ ಕೋಮುಗಲಭೆ, ಗ್ಯಾಂಗ್ ವಾರ್ ಗಳು ನಡೆದಿವೆ.ಗ್ಯಾಂಗ್ ಸ್ಟರ್ ಗಳು ತಲೆ ಎತ್ತಿರುವುದು ಕೂಡಾ ಕಾಂಗ್ರೆಸ್ ಆಡಳಿತದಲ್ಲಿಯೇ ಹೊರತು ಬಿಜೆಪಿ ಆಡಳಿತದಲ್ಲಲ್ಲಾ.
ದ.ಕ. ಜಿಲ್ಲೆಯಲ್ಲಿ ಗಲಭೆ, ಬಂದ್, ಅಮಾಯಕರ ಕೊಲೆ ನಡೆದಿರುವುದು ಕಾಂಗ್ರೆಸ್ ಮುಖಂಡರ ಆಡಳಿತ ಸಮಯದಲ್ಲಿ ಏಂದು ಆರೋಪಿಸಿದ ಅವರು ಮಂಗಳೂರು ಕಾರಾಗೃಹದಲ್ಲಿ ಹಾಗೂ ಮಂಗಳೂರು ಹೊರವಲಯದ ಫರಂಗಿಪೇಟೆಯಲ್ಲಿ ಡಬಲ್ ಮರ್ಡರ್ ನಡೆದಿವೆ ಎಂದು ಅವರು ಕಿಡಿಕಾರಿದರು.
You must be logged in to post a comment Login