Connect with us

LATEST NEWS

Lol! This man came now @DVSadanandGowda ರೆ,..ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನ ಮರೆಯಬೇಡಿ – ಚಕ್ರವರ್ತಿ ಸೂಲಿಬೆಲೆ

Lol! This man came now.@DVSadanandGowda ರೆ,..ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನ ಮರೆಯಬೇಡಿ – ಚಕ್ರವರ್ತಿ ಸೂಲಿಬೆಲೆ

ಮಂಗಳೂರು ಅಕ್ಟೋಬರ್ 2: ರಾಜ್ಯ ನೆರೆ ಪ್ರವಾಹದ ಪರಿಹಾರದ ಕುರಿತಂತೆ ರಾಜ್ಯದ 25 ಬಿಜೆಪಿ ಸಂಸದರ ವಿರುದ್ದ ಅಸಮಧಾನ ಹೊರಹಾಕಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರವನ್ನು ಸಮರ್ಥಿಸಲು ಹೊರಟ ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಚಕ್ರವರ್ತಿ ಸೂಲಿಬೆಲೆ ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ ಎಂದು ಟಾಂಗ್ ನೀಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಅವರ ಹೇಳಿಕೆ ವಿರುದ್ದ ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್ ಮೂಲಕ ಹೇಳಿಕೆ ನೀಡಿದ್ದರು. ಪ್ರವಾಹ ಪರಿಹಾರದ ಬಗ್ಗೆ ಇಲ್ಲಸಲ್ಲದ ಕಥೆ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವವರ ಬಗ್ಗೆ ಕನಿಕರವಿದೆ ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಇವರು ಈಗ ಬಂದರು ಎಂದು ರಿಟ್ವೀಟ್ ಮಾಡುವ ಮೂಲಕ ಗೌಡರಿಗೆ ಸೂಲಿಬೆಲೆ ಟಾಂಗ್ ಕೊಟ್ಟಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ,ಮಧ್ಯಂತರ ಪರಿಹಾರ ಮತ್ತು ಧೀರ್ಘ ಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ @nsitharaman ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರವಾಹದಿಂದ ತೊಂದರೆಗೀಡಾದವರಿಗೆ ತಕ್ಷಣ ಆಗಬೇಕಾದ ಪರಿಹಾರವನ್ನು ನಮ್ಮ ರಾಜ್ಯ ಸರಕಾರ ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಘೋಷಣೆ ಆಗಲಿದೆ. ನಮ್ಮದು ಜನರಿಂದ ಆಯ್ಕೆಯಾದ ಸರಕಾರ ಜನರಿಗೋಸ್ಕರ ಇರುವ ಸರಕಾರ, ಸಂಕಷ್ಟದಲ್ಲಿರುವವರ ಬೇನೆ ಬಗ್ಗೆ ನಮಗೆ ಅರಿವಿದೆ ಇದರಲ್ಲಿ ಯಾವುದೇ ನಿರ್ಲಕ್ಷ ಇಲ್ಲ. ಈ ಬಗ್ಗೆ ನಾನು ನಿರಂತರ ಸಂಭಂದಪಟ್ಟ ಕೇಂದ್ರ ಸರಕಾರದ ಇಲಾಖೆಗಳ ಮಂತ್ರಿಗಳ ಸಂಪರ್ಕದಲ್ಲಿದ್ದೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾವು ನೊಂದವರ ಪರ ಜವಾಬ್ದಾರಿಯಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ

ಲೊಲ್! ಇವರು ಈಗ ಬಂದರು.. ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾಷ್ಟ್ರ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ ಎಂದು ಡಿವಿ ಸದಾನಂದ ಗೌಡರನ್ನು ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ ಕೇಂದ್ರ ಸರಕಾರ ರಾಜ್ಯದ ನೆರೆ ಪರಿಹಾರ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ರಾಜ್ಯದ ಸಂಸದರ ವಿರುದ್ದ ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜ್ಯದ ಸಂಸದರು ಕೇಂದ್ರ ಸರಕಾರದ ನಿರ್ಲಕ್ಷ ನೀತಿಯನ್ನು ಸಮರ್ಥಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *