LATEST NEWS
ವಿದೇಶದಲ್ಲಿ ಕೆಲಸದ ಭರವಸೆ ನೀಡಿ 1.82 ಕೋಟಿ ವಂಚಿಸಿದ ಆರೋಪಿ ಅರೆಸ್ಟ್

ಮಂಗಳೂರು ಮೇ 20: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಮುಂಬಯಿಯ ವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್ (36 ) ಎಂದು ಗುರುತಿಸಲಾಗಿದೆ.
ಆರೋಪಿ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಫಿರ್ಯಾದಿದಾರರಿಂದ ರೂ.1,65,000/- ಹಣವನ್ನು ಪಡೆದು ಅಲ್ಲದೇ ಸಾಕಷ್ಟು ಯುವಕರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 1 ಕೋಟಿ 82 ಲಕ್ಷ ರೂಪಾಯಿ ಹಣವನ್ನು ಪಡೆದು ನಂಬಿಕೆ ದ್ರೋಹ ವಂಚಿಸಿದ್ದಕ್ಕಾಗಿ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸಿಸಿಬಿ ಘಟಕದಲ್ಲಿ ತನಿಖೆಯಲ್ಲಿರುತ್ತದೆ.
ಈ ಮೇಲಿನ ಆರೋಪಿಯ ವಿರುದ್ದ ಈಗಾಗಲೇ ಯಾವುದೇ ಅನುಮತಿ ಇಲ್ಲದೆ ಕಂಪೆನಿ ತೆರೆದು ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳಿಂದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2024 ನೇ ಡಿಸೆಂಬರ್ ನಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಮೇಲಿನ ಎರಡೂ ಪ್ರಕರಣಗಳು ಮಂಗಳೂರು ಪೂರ್ವ ಪೊಲೀಸ್ ಠಾಣೆಯಿಂದ ಮುಂದಿನ ತನಿಖೆಯ ಬಗ್ಗೆ ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿದೆ
1 Comment