Connect with us

    FILM

    ತುಮಕೂರು ವಿವಿಯ ಗೌರವ ಡಾಕ್ಟರೇಟ್‌ ಪದವಿ ನಿರಾಕರಿಸಿದ ಕಿಚ್ಚ..!

    ಬೆಂಗಳೂರು :  ಖ್ಯಾತ ಬಹುಭಾಷಾ ನಟ  ಕನ್ನಡಿಗ ಕಿಚ್ಚ ಸುದೀಪ್ ತುಮಕೂರು ವಿಶ್ವವಿದ್ಯಾಲಯ ಕೊಡ ಮಾಡುವ ಗೌರವ ಡಾಕ್ಟರೇಟ್‌  ಪದವಿಯನ್ನು ನಿರಾಕರಿಸಿದ್ದಾರೆ.

     

    ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತಿತರ ಭಾಷೆಗಳ ಸಿನೆಮಾಗಳಲ್ಲೂ ಅಭಿನಯಿಸಿರುವ ಸುದೀಪ್‌ ಅವರು ಚಿತ್ರರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಕೊಡಲು ತೀರ್ಮಾನಿಸಿತ್ತು.

    ಸಿನೆಮಾಗಳ ಜೊತೆಗೆ ಸುದೀಪ್‌ ಸಾಕಷ್ಟು ಸಮಾಜಮುಖಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಸುದೀಪ್ ಅವರ ಒಳ್ಳೆಯ ಕೆಲಸವನ್ನು ಗಮನಿಸಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು, ಆದರೆ ಕಿಚ್ಚ ಸುದೀಪ್  ಈ ಗೌರವನ್ನು ನಿರಾಕರಿಸಿದ್ದಾರೆ. ಕಿಚ್ಚ ಸುದೀಪ್ ಅವರ ಈ ಮಾದರಿ ನಡೆಗೆ  ಸಾಮಾಜಿಕ ವಲಯದಲ್ಲಿ ಭಾರಿಮೆಚ್ಚುಗೆ ವ್ಯಕ್ತವಾಗಿದೆ.

    ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಸುದೀಪ್‌ಗೆ ಗೌರವ ಡಾಕ್ಟರೇಟ್‌ ಕೊಡುವುದೆಂದು ತೀರ್ಮಾನವಾಗಿತ್ತು. ಈ ವಿಷಯ ತಿಳಿಸಿದಾಗ ವಿವಿ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ಹೇಳಿರುವ ಸುದೀಪ್ ಡಾಕ್ಟರೇಟನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿ’ ಎಂದು ಸುದೀಪ್ ಕೋರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply