FILM
ಈ ನಟನ ಭೇಟಿಯಾಗಲು ರಿಷಬ್ ಶೆಟ್ಟಿಗೆ 24 ವರ್ಷಗಳ ಬೇಕಾಯ್ತು…!!
ಬೆಂಗಳೂರು ಅಗಸ್ಟ್ 07: 24 ವರ್ಷಗಳ ಕಾಯುವಿಕೆ ಬಳಿಕ ರಿಷಬ್ ಶೆಟ್ಟಿ ಅವರು ತಮಿಳು ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾಗಿದ್ದಾರೆ.
ಚಿಯಾನ್ ವಿಕ್ರಮ್ ಅವರು ತಮ್ಮ ಹೊಸ ಚಿತ್ರ ‘ತಂಗಲನ್’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಇಬ್ಬರೂ ಭೇಟಿಯಾಗಿದ್ದಾರೆ.
ಪೋಟೊಗಳನ್ನು ಹಂಚಿಕೊಂಡ ರಿಷಬ್, ‘ನಟನಾಗುವ ನನ್ನ ಪಯಣದಲ್ಲಿ ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿ. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಂದು ನನಗೆ ಸ್ಪೂರ್ತಿಯಾದ ವ್ಯಕ್ತಿಯನ್ನು ಭೇಟಿಯಾಗಿದ್ದೇನೆ. ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು. ‘ತಂಗಲನ್’ ಚಿತ್ರಕ್ಕಾಗಿ ನಿಮಗೆ ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
You must be logged in to post a comment Login