LATEST NEWS
ತುಳು ಕೊಂಕಣಿ ನಟ ಸುನಿಲ್ ಬಜಾಲ್ ಹೃದಯಾಘಾತದಿಂದ ನಿಧನ

ಮಂಗಳೂರು ಮೇ 22: ಕೊಂಕಣಿ ಮತ್ತು ತುಳು ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿದ್ದ ನಟ ಸುನೀಲ್ ಬಜಾಲ್ (45) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೊಂಕಣಿ ನಾಟಕಗಳಲ್ಲಿ ನಟಿಸಿ ಖ್ಯಾತರಾಗಿದ್ದ ಅವರು ನಂತರ ನಟನಾ ವೃತ್ತಿ ಪ್ರಾರಂಭಿಸಿ ಬಳಿಕ ಕೊಂಕಣಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ಸುನಿಲ್ ಅವರು ಫ್ಲಾಟ್ ನಂ 403 ಧಾರಾವಾಹಿಯಲ್ಲಿ ‘ಬೆನ್ನ’ ಪಾತ್ರದಲ್ಲಿ ಮಿಂಚಿದ್ದು, ಕೊಂಕಣಿ ಧಾರಾವಾಹಿ ‘ಗಾಡ್ ಫಾದರ್’ ಮತ್ತು ಕೊಂಕಣಿ ಚಲನಚಿತ್ರ ‘ಕೊಂಬ್ಯಾಟ್’ ನಲ್ಲಿ ಸಹ ನಟಿಸಿದ್ದಾರೆ. ಇನ್ನು ಮಂಗಳೂರಿನ ಕೊಂಕಣಿ ನಾಟಕ ಸಭಾದ ಸಕ್ರಿಯ ಸದಸ್ಯರೂ ಆಗಿದ್ದ ಅವರು, ವೃತ್ತಿಯಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ
