LATEST NEWS
ಗಂಡನ ಮೇಲೆ ಹೆಂಡತಿಯ ದೌರ್ಜನ್ಯ – ಪೊಲೀಸರು ನಂಬಲ್ಲ ಅಂತ ಸಿಸಿಟಿವಿ ಇಟ್ಟು ರೆಕಾರ್ಡ್ ಮಾಡಿದ ಗಂಡ
ಲಖನೌ ಮೇ 06 : ಹೆಂಡತಿಯ ಮೇಲೆ ಗಂಡನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತದೆ. ಹೆಂಡತಿಯನ್ನು ಚಿತ್ರಹಿಂಸೆ ಮಾಡುವ ಗಂಡಂದಿರುವ ಕೊನೆಗೆ ಜೈಲು ಕಂಬಿ ಎಣಿಸುತ್ತಾರೆ. ಆದರೆ ಇಲ್ಲೊಂದು ಉಲ್ಟಾ ಕೇಸ್ ಆಗಿದ್ದು. ಪ್ರೇಮ ವಿವಾಹವಾದ ಬಳಿಕ ಪತಿಗೆ ಚಿತ್ರಹಿಂಸೆ ನೀಡಿದ ಪ್ರಕರಣ ಬಿಜ್ನೋರ್ ನಲ್ಲಿ ಬೆಳಕಿಗೆ ಬಂದಿದೆ. ಪತಿ ಕೈಕಾಲು ಕಟ್ಟಿ ಖಾಸಗಿ ಭಾಗಕ್ಕೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಸಿಯೋಹರಾ ಗ್ರಾಮವೊಂದರಲ್ಲಿ ವಾಸಿಸುತ್ತಿರುವ ಮನ್ನನ್ ಝೈದಿ ತನ್ನ ಪತ್ನಿ ಮೆಹರ್ಜಹಾನ್ ತನಗೆ ಅಮಲು ಪದಾರ್ಥ ನೀಡಿ ಚಿತ್ರಹಿಂಸೆ ನೀಡುತ್ತಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದನು. ನಾನು ಪ್ರಜ್ಞೆ ತಪ್ಪಿದಾಗ, ಅವಳು ನನ್ನ ಕೈ ಮತ್ತು ಕಾಲುಗಳನ್ನು ಕಟ್ಟಿ ಹೊಡೆಯುತ್ತಾಳೆ. ಅಲ್ಲದೆ ನಿರಂತರವಾಗಿ ಹಿಂಸಿಸುತ್ತಲೇ ಇರುತ್ತಾಳೆ. ಕೆಲ ಸಮಯದ ಹಿಂದೆ ಪತಿಗೆ ಮಾದಕ ಮಾತ್ರೆಗಳನ್ನು ನೀಡಿ ನಂತರ ಸಿಗರೇಟ್‌ನಿಂದ ಆಕೆಯ ದೇಹವನ್ನು ಸುಟ್ಟು ಹಾಕಿದ್ದ. ನಂತರ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಳು.
ಈ ವೇಳೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ವಿಡಿಯೋವನ್ನು ಪೊಲೀಸರಿಗೆ ನೀಡಿದ್ದಾನೆ. ಈ ವಿಡಿಯೋದಲ್ಲಿ ಪತ್ನಿ ತನ್ನ ಪತಿಯನ್ನು ವೇಲ್ ನಿಂದ ಕೈಕಾಲು ಕಟ್ಟಿ ಥಳಿಸಿದ್ದಾಳೆ. ಆತನ ಎದೆಯ ಮೇಲೆ ಕುಳಿತು ಕತ್ತು ಹಿಸುಕಲು ಯತ್ನಿಸುತ್ತಿರುವ ದೃಶ್ಯವೂ ಇದೆ. ಈ ವಿಡಿಯೋದಲ್ಲಿ ಆಕೆ ಆತನನ್ನು ಥಳಿಸುತ್ತಿರುವುದನ್ನು ಹಾಗೂ ಆತನ ದೇಹವನ್ನು ಸಿಗರೇಟಿನಿಂದ ಸುಟ್ಟು ಹಾಕುತ್ತಿರುವುದನ್ನು ಸಹ ಕಾಣಬಹುದು.