Connect with us

    LATEST NEWS

    ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳಾ ಕಾಂಗ್ರೇಸ್ ಪ್ರತಿಭಟನೆ – ಸಾವಿರಾರು ಮಹಿಳೆಯರ ಮಾನ ಕಳೆದಿದ್ದಾನೆ ; ಶಾಲೆಟ್ ಪಿಂಟೋ ಆಕ್ರೋಶ

    ಮಂಗಳೂರು ಮೇ 06 : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಂಗಳೂರಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಮಹಿಳಾ ಕಾಂಗ್ರೇಸ್ ಸಮಿತಿ ಪ್ರತಿಭಟನೆ ನಡೆಸಿತು. ಪ್ರಜ್ವಲ್ ರೇವಣ್ಣ ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೆಲ್ಲಾ ಹೆಣ್ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಅಂದ್ರೆ, ಭಯ, ಆ ಕುಟುಂಬದ ಬಗ್ಗೆ ಹೇಸಿಗೆ ಹುಟ್ಟುತ್ತದೆ. ತೆನೆಹೊತ್ತ ಮಹಿಳೆಯನ್ನು ಪಕ್ಷದ ಚಿಹ್ನೆ ಮಾಡಿಕೊಂಡು ನೂರಾರು ಮಹಿಳೆಯರ ಮಾನ ಕಳೆದಿದ್ದಾನೆ.

    ಪ್ರಜ್ವಲ್ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ಆತನಿಗೆ ಗುಂಡು ಹಾರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಆಗ್ರಹಿಸಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಬೇಕು, ಮಹಿಳೆಯರ ಅತ್ಯಾಚಾರವೆಸಗಿ ವಿದೇಶದಲ್ಲಿ ಅಡಗಿ ಕೂತಿರುವ ಪ್ರಜ್ವಲ್ ರೇವಣ್ಣರನ್ನು ವಾಪಸ್ಸು ಕರೆತಂದು ಬಂಧಿಸಿ ಎಂದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತೆಯರು, ಮಹಿಳೆಯರಿಗೆ ಘನತೆಯ ಬದುಕು ಬೇಕು ಸ್ತ್ರೀ ಕಂಟಕರಿಗೆ ಶಿಕ್ಷೆಯಾಗಲೇಬೇಕು ಎಂದು ಬರೆದ ಪ್ಲಕಾರ್ಡ್ ಗಳನ್ನು ಪ್ರದರ್ಶಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply