LATEST NEWS
ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಅಪಹಾಸ್ಯ ಮಾಡಿದರೂ ಆರಾಮವಾಗಿರುವ ಕಾಮಿಡಿಯನ್ ಕುನಾಲ್ ಕಾಮ್ರಾ..
ನವದೆಹಲಿ ನವೆಂಬರ್ 21: ಜಿಲ್ಲೆಗಳಲ್ಲಿರುವ ಸೆಶೆನ್ಸ್ ಕೋರ್ಟ್ ವಿರುದ್ದ ಮಾತನಾಡಲು ಸಾಮಾನ್ಯ ಜನರು ಭಯಪಡುವಂತ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ ಹಾಲಿ ನ್ಯಾಯಾಧೀಶರ ವಿರುದ್ದ ಅಸಹ್ಯಕರವಾಗಿ ಟ್ವೀಟ್ ಮೂಲಕ ಗೇಲಿ ಮಾಡಿದರೂ ಯಾವುದೇ ರೀತಿಯ ಕಾನೂನು ಕ್ರಮಗಳಿಲ್ಲದೆ ಕಾಮಿಡಿಯನ್ ಕುನಾಲ್ ಕಾಮ್ರಾ ಆರಾಮವಾಗಿರುವುದು ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಮೂಡುವಂತಾಗಿದೆ.
ರಿಪಬ್ಲಿಕ್ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದನ್ನು ವಿರೋಧಿಸಿ ಕಾಮಾಡಿಯನ್ ಕುನಾಲ್ ಕಾಮ್ರಾ ಸುಪ್ರೀಂಕೋರ್ಟ್ ನ್ನು ಅಪಹಾಸ್ಯ ಟ್ವೀಟ್ ಮಾಡಿದ್ದರು. ಈ ಹಿನ್ನಲೆ ಕಾಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಒಪ್ಪಿಗೆ ನೀಡಿದ್ದರು.
ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿರುವ ಕಾಮ್ರಾ ಈ ಬಾರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೊಬ್ಬರ ಹೆಸರನ್ನು ಉಲ್ಲೇಖಿಸಿ ಅಸಭ್ಯ ರೀತಿಯಲ್ಲಿ ಟ್ವೀಟ್ ಮಾಡಿರುವ ಅವರು ಮತ್ತೊಮ್ಮೆ ನ್ಯಾಯಾಂಗ ನಿಂದನೆಯ ಆರೋಪ ಎದುರಿಸುವಂತಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿರುವ ಮನವಿಗೆ ಅಟಾರ್ನಿ ಜನರಲ್ ಕೆ .ವೇಣುಗೋಪಾಲ್ ಸಮ್ಮತಿ ಸೂಚಿಸಿದ್ದಾರೆ.
ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಎರಡು ಬೆರಳುಗಳ ಚಿತ್ರವನ್ನು ಟ್ವೀಟ್ ಮಾಡಿರುವ ಕಮ್ರಾ ಈ ಎರಡು ಬೆರಳುಗಳಲ್ಲಿ ಮಧ್ಯದ ಬೆರಳನ್ನು ‘ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಬೋಬ್ಡೆ ಅವರಿಗೆ ತೋರಿಸುತ್ತಿದ್ದೇನೆ,’ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಕಮ್ರಾ ಟ್ವೀಟ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಲಹಾಬಾದ್ ಹೈಕೋರ್ಟ್ ವಕೀಲ ಅನುಜ್ ಸಿಂಗ್ ವೇಣುಗೋಪಾಲ್ ಅವರಿಗೆ ಸಲ್ಲಿಸಿರುವ ಮನವಿ ಪುರಸ್ಕೃತವಾಗಿದೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಟಾರ್ನಿ ಜನರಲ್ ಕುನಾಲ್ ಕಮ್ರಾ ಮಾಡಿರುವ ಟ್ವೀಟ್ ಹೇಸಿಗೆ ಹುಟ್ಟಿಸುವಂಥಾಗಿದ್ದು ಅದು ಭಾರತದ ಸರ್ವೋಚ್ಛ ನ್ಯಾಯಾಲಯವನ್ನೇ ಅವಮಾನಕ್ಕೀಡು ಮಾಡಿದಂತಿದೆ ಕುನಾಲ್ ಕಮ್ರಾ ತಮಾಷೆ ಮತ್ತು ನಿಂದನೆಯ ನಡುವಿನ ಸೀಮೆ ದಾಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು “ಅತ್ಯಂತ ಅಶ್ಲೀಲ ಮತ್ತು ಅಸಹ್ಯಕರ”. ಇದು ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ನ್ಯಾಯಾಂಗದ ಮೇಲೆ ಆಕ್ರಮಣ ಮಾಡುವುದರಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಂತ್ರಿಗಳ ವಿರುದ್ದ ಅವಹೇಳನಕಾರಿಯಾಗಿ ಬರಹ ಬರೆದರೆ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಪೊಲೀಸ್ ಇಲಾಖೆಗಳು , ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಹೀಯಾಳಿಸಿದರು ಕೂಡ ಇನ್ನು ಕ್ರಮಕ್ಕಾಗಿ ಅರ್ಜಿ ಹಾಕುವುದರಲ್ಲೇ ಇರುವುದು..ದೇಶದ ಕಾನೂನು ಶ್ರೀಮಂತರು ಹಾಗೂ ಬಡವರಿಗೆ ಬೇರೆ ಬೇರೆ ಎನ್ನುವುದನ್ನು ತೋರಿಸುವಂತಿದೆ.