Connect with us

    LATEST NEWS

    ಶ್ರೀಕೇತ್ರ ಕಟೀಲಿನಲ್ಲಿ ನಡೆದ ಬೆಂಕಿ ಯುದ್ಧ

    ಶ್ರೀಕೇತ್ರ ಕಟೀಲಿನಲ್ಲಿ ನಡೆದ ಬೆಂಕಿ ಯುದ್ಧ

    ಮಂಗಳೂರು ಎಪ್ರಿಲ್ 22: ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ತೂಟೇದಾರ ಅಗ್ನಿಖೇಳಿ ಸೇವೆ ನಡೆಯಿತು. ಉತ್ಸವದ ಮುಖ್ಯ ಆಕರ್ಷಣೆಯೇ ತೂಟೆದಾರ ಸೇವೆ.

    ಎರಡು ಮಾಗಣಿಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಗಳ ಜನರ ನಡುವೆ ನಡೆಯುವ ಬೆಂಕಿಯ ಆಟ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ನೂರಾರು ವರ್ಷಗಳಿಂದ ಈ ತೂಟೆದಾರ ಬೆಂಕಿಯ ಆಟ ನಡೆದು ಬರುತ್ತಿದ್ದರು ಬೆಂಕಿ ಅನಾಹುತ, ಭಕ್ತಾಧಿಗಳು ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.

    ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರ ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ವರ್ಷಂಪ್ರತಿ ಇಲ್ಲಿಯ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಜಾತ್ರಾ ಮಹೋತ್ಸವ ಅಂಗವಾಗಿ ಅದ್ದೂರಿ ರಥೋತ್ಸವವನ್ನು ಕಣ್‌ತುಂಬಿಕೊಳ್ಳಲು ದೇಶ ವಿದೇಶದಿಂದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.

    ಜಾತ್ರಾ ಮಹೋತ್ಸವದ ಕೊನೆಯ ದಿನ ಹರಕೆ ಸೇವೆಯ ನಿಮಿತ್ತ ನಡೆಯುವ ತೂಟೆದಾರ ಅಗ್ನಿ ಖೇಳಿಯನ್ನು ನೋಡಲು ಸಾವಿರಾರು ಜನರು ಜಮಾಯಿಸುತ್ತಾರೆ. ತೂಟೆದಾರ ಎಂದರೆ ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೆಲೊಬ್ಬರು ಎಸೆಯುವ ಆಟ.

    ಜಲ ದುರ್ಗೆಯಾದಂತಹ ದುರ್ಗಾ ಪರಮೇಶ್ವರಿಗೆ ಈ ಆಟ ಇಷ್ಟವಾದ ಕಾರಣ ಈ ಆಟ ನಡೆಯುತ್ತಿದೆ ಎಂದು ಹೇಳಲಾಗಿದೆ. ದೇವರ ಸೇವಾ ರೂಪದಲ್ಲಿ ಹಿಂದಿನಿಂದಲೂ ಈ ಖೇಳಿ ಅಥವಾ ಆಟ ನಡೆದು ಬರುತ್ತಿದ್ದು ಊರಿನ ಜನರಿಗೆ ಕಷ್ಟ ಕಾರ್ಪಣ್ಯಗಳು ಬಂದರೆ ದೇವರ ಹರಕೆ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply