LATEST NEWS
ಮಂಗಳೂರಿನಲ್ಲಿ ಕಡಲಬ್ಬರ : ಉಚ್ಚಿಲ, ಸೊಮೇಶ್ವರದಲ್ಲಿ 40 ಅಡಿ ಮುಂದೆ ಬಂದ ಸಮುದ್ರ..!!
ಮಂಗಳೂರಿನಲ್ಲಿ ಕಡಲಬ್ಬರ : ಉಚ್ಚಿಲ, ಸೊಮೇಶ್ವರದಲ್ಲಿ 40 ಅಡಿ ಮುಂದೆ ಬಂದ ಸಮುದ್ರ..!!
ಮಂಗಳೂರು ಎಪ್ರಿಲ್ 22: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಡಲ ಅಬ್ಬರದ ಅಲೆಗಳು ಸಮುದ್ರ ತೀರದಲ್ಲಿ ಸುಮಾರು 40 ಅಡಿಗಳಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿದೆ.
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ಮಾಹಿತಿ ಪ್ರಕಾರ ಶನಿವಾರ ಮತ್ತು ಭಾನುವಾರ ಕರಾವಳಿಯ ಕಡಲ ತೀರದಲ್ಲಿ ಸುಮಾರ 2 ರಿಂದ 3 ಮೀಟರ್ ನಷ್ಟು ಎತ್ತರದ ಅಲೆಗಳು ದಡದತ್ತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿತ್ತು.
ಆದರೆ ಇದರ ಲಕ್ಷಣಗಳು ಒಂದು ದಿನದ ಮುಂಚಿತವಾಗಿ ನಿನ್ನೆ ಕಾಣಿಸಿಕೊಂಡಿದೆ.
ಪಣಂಬೂರು ಕಡಲ ಕಿನಾರೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 2.30 ರಿಂದ 4.30ರ ವರೆಗೆ ಸಮುದ್ರದ ಅಲೆಗಳು ಸುಮಾರು 40 ಅಡಿಯಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿತ್ತು.
ಈ ಹಿನ್ನಲೆಯಲ್ಲಿ ಪಣಂಬೂರು ಬೀಚ್ ನಲ್ಲಿ ಯಾವಾಗಲೂ ನಡೆಯುತ್ತಿದ್ದ ಸ್ವೀಡ್ ಬೋಟ್ ಸಹಿತ ವಿವಿಧ ನೀರಿನಾಟಗಳಿಗೆ ಶನಿವಾರ ಬ್ರೇಕ್ ಹಾಕಲಾಗಿತ್ತು.
ಉಚ್ಚಿಲ, ಸೋಮೇಶ್ವರ ಉಡುಪಿಯ ಮಲ್ಪೆ, ಪಡುಕೆರೆ , ಕೋಡಿ, ಕನ್ಯಾನ, ಕಾಪು ಭಾಗದಲ್ಲಿ ಸಮುದ್ರದ ಅಲೆಗಳು ಪ್ರಕ್ಷುಬ್ದಗೊಂಡಿರುವುದು ಕಂಡು ಬಂದಿದೆ.
ಸಮುದ್ರದ ಬೃಹತ್ ಅಲೆಗಳು ತಡೆಗೋಡೆಗೆ ಅತೀವೇಗದಲ್ಲಿ ಬಡಿಯುತ್ತಿದೆ.
ಮಂಗಳೂರನಲ್ಲಿ ಬಹುತೇಕ ಮೀನುಗಾರಿಕೆ ಬೋಟುಗಳು ಲಂಗರು ಹಾಕಿದ್ದು , ಜಿಲ್ಲಾಡಳಿತದ ಸೂಚನೆ ನಂತರ ಮೀನುಗಾರಿಕೆಗೆ ತೇರಳುವ ಸಾಧ್ಯತೆ.
ಶನಿವಾರ ಮೀನುಗಾರಿಕೆಗೆ ತೆರಳಲು ಸಿದ್ದತೆ ನಡೆಸಿದ ಬೋಟುಗಳು ಕಡಲ ಪ್ರಕ್ಷುಬ್ದತೆಯನ್ನು ನೋಡಿ ಕಡಲಿಗೆ ಇಳಿಯಲಿಲ್ಲ.
ಈ ನಡುವೆ ಉಳ್ಳಾಲದಲ್ಲಿ ಸಮುದ್ರಕ್ಕೆ ತೆರಳಿದ್ದ ಶೇಕಡ 20 ರಷ್ಟು ಟ್ರಾಲ್ ಬೋಟ್ ಗಳು ವಾಪಾಸ್ ದಡಕ್ಕೆ ಬಂದಿದೆ.
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ಮಾಹಿತಿ ಪ್ರಕಾರ ಇಂದು ಸಮುದ್ರದಲ್ಲಿ ಭಾರಿ ಅಲೆಗಳು ಎಳುವ ಸಾಧ್ಯತೆ ಇದ್ದು ಮೀನುಗಾರರ ಎಚ್ಚರಿಕೆಯಿಂದ ಇರಲು ಮುನ್ಸೂಚನೆ ನೀಡಿದೆ.
You must be logged in to post a comment Login