Connect with us

    LATEST NEWS

    ಬೈಂದೂರಿನ ಕೆರಾಡಿಯಲ್ಲಿ ಮತ ಚಲಾಯಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

    ಉಡುಪಿ ಮೇ 07: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ತಮ್ಮ ಹುಟ್ಟೂರು ಕೆರಾಡಿಯಲ್ಲಿ ಲೋಕಸಭೆ ಚುನಾವಣೆಯ ಮತ ಚಲಾಯಿಸಿದ್ದಾರೆ. ಕಾಂತಾರ ಸಿನೆಮಾ ಬಾಗ 1 ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಮತದಾನಕ್ಕಾಗಿ ಶೂಟಿಂಗ್ ಗೆ ಬ್ರೇಕ್ ನೀಡಿ ಮತದಾನ ಮಾಡಿದ್ದಾರೆ. ರಿಷಬ್ ಹುಟ್ಟುರಾದ ಬೈಂದೂರಿನ ಕೆರಾಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.


    ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕೆ, ವೋಟ್ ಮಾಡುವುದು ನಮ್ಮ ಹಕ್ಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಇದೀಗ ನಾನು ಮತ ಚಲಾಯಿಸಿದ್ದೇನೆ ಎಂದು ರಿಷಬ್ ಮಾತನಾಡಿದ್ದಾರೆ. ಎಲ್ಲರೂ ಮತ ಚಲಾಯಿಸುವಂತೆ ರಿಷಬ್‌ ಮನವಿ ಮಾಡಿದ್ದಾರೆ. ಮತ ಚಲಾಯಿಸಿದ ನಂತರ ರಿಷಬ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಲ್ಲರೊಂದಿಗೆ ಬೆರತು ಮಾತನಾಡಿ ಸೆಲ್ಫಿ ನೀಡಿ ನಟ ರಿಷಬ್ ತೆರಳಿದ್ದಾರೆ.

    ಈ ವೇಳೆ, ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುತ್ತಿರುವ ಬಗ್ಗೆ ರಿಷಬ್ ಮಾತನಾಡಿ, ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಗ್ರೌಂಡನ್ನು ಮಕ್ಕಳಿಗೆ ಆಟ ಆಡಲು ದೊಡ್ಡ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply