LATEST NEWS
ಕಾಫಿ ನಾಡಿನಲ್ಲಿ ಹುಲಿಗಳ ಆರ್ಭಟ : ಭಯದ ನೆರಳಿನಲ್ಲಿ ಗ್ರಾಮಸ್ಥರು
ಕಾಫಿ ನಾಡಿನಲ್ಲಿ ಹುಲಿಗಳ ಆರ್ಭಟ : ಭಯದ ನೆರಳಿನಲ್ಲಿ ಗ್ರಾಮಸ್ಥರು
ಚಿಕ್ಕಮಗಳೂರು, ಡಿಸೆಂಬರ್ 05 : ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಹುಲಿಗಳ ಓಡಾಟದಿಂದ, ಭಯದ ವಾತಾವರಣ ನಿರ್ಮಾಣಗೊಂಡಿದೆ.
ಹುಲಿಗಳ ಓಡಾಟದ ಭೀತಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯ ಉದುಸೆ, ಹೊತ್ತಿಕೆರೆ, ಹೆಗ್ಗರವಳ್ಳಿ, ಚಕ್ಕೂಡಿಗೆ ದಿಣ್ಣೆಕೆರೆಯ ಗ್ರಾಮಗಳಲ್ಲ್ಲಿಹಗಲಿನಲ್ಲೇ ಹುಲಿಗಳು ರಾಜರೋಷವಾಗಿ ಓಡಾಟ ನಡೆಸುತ್ತಿರುವುದು, ಗ್ರಾಮಸ್ಥರ ಭೀತಿಗೆ ಕಾರಣವಾಗಿದೆ.
ಹುಲಿಗಳಿಗೆ ಹೆದರಿ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ.
ಹಗಲಿನಲ್ಲೇ ಹುಲಿಗಳು ಓಡಾಟ ನಡೆಸುತ್ತಿರುವುದರಿಂದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ.
ಗ್ರಾಮದ ಆಸುಪಾಸಿನಲ್ಲಿ ಅನೇಕ ದನಗಳು ಈಗಾಗಲೇ ಹುಲಿಗಳಿಗೆ ಆಹಾರವಾಗಿವೆ.
ಎರಡರಿಂದ ಮೂರು ಹುಲಿಗಳಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದ್ದು, ಕಳೆದ 3 ದಿನ ಹಿಂದೆ ಬೇಟೆಯಾಡಿರೋ ದನವನ್ನು ಮತ್ತೆ ಬೇರೆ ಸ್ಥಳಕ್ಕೆ ಕೊಂಡೋಯ್ದಿರುವ ಕುರುಹುಗಳು ಲಭ್ಯವಾಗಿವೆ.
ಹುಲಿಗಳಿರುವ ಬಗ್ಗೆ ಈಗಾಗಲೇ ಸ್ಪಷ್ಟವಾಗಿದ್ದು, ಹುಲಿಗಳು ಓಡಾಡುವ ದೃಶ್ಯಗಳು ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಗಳಲ್ಲಿ ಸೆರೆಯಾಗಿದೆ.
ಇಷ್ಟಾದರೂ ಯಾವುದೇ ಹಿರಿಯ ಅರಣ್ಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
You must be logged in to post a comment Login