Connect with us

    DAKSHINA KANNADA

    ಗುರುವಾರ ಈದ್​ ಉಲ್​ ಫಿತರ್​ : ದ.ಕ ಜಿಲ್ಲಾ ಖಾಜಿ ಘೋಷಣೆ

    ಮಂಗಳೂರು, ಮೇ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಂದು ಈದ್​- ಉಲ್ – ಫಿತರ್​ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಕಾಜ್​ ತ್ವಾಕ್​ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ.

    ಇಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಗುರುವಾರ ಈದ್​ -ಉಲ್ – ಫಿತರ್​ ನಡೆಯಲಿದೆ. ಇಂದು ಚಂದ್ರದರ್ಶನವಾಗಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ( ಬುಧವಾರ) ಈದ್​-ಉಲ್ – ಫಿತರ್​ ಆಚರಣೆ ನಡೆಯಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರಕ್ಕೆ 30 ದಿನದ ರಂಜಾನ್ ಉಪವಾಸ ಪೂರ್ಣಗೊಳ್ಳಲಿದೆ.

    ಸಾಧಾರಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ದಿನದ ಉಪವಾಸದಂದು ಚಂದ್ರದರ್ಶನವಾಗಿ ಮರುದಿನ ಹಬ್ಬ ಆಚರಣೆ ನಡೆಯುತ್ತದೆ. ಆದರೆ, ಇಂದು‌ ಚಂದ್ರದರ್ಶನವಾಗದೇ ಇರುವುದರಿಂದ ಗುರುವಾರ ಈದ್​ – ಉಲ್​ – ಫಿತರ್​ ಆಚರಣೆ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply