Connect with us

  LATEST NEWS

  ಇಸ್ರೇಲ್ ವಾಯುದಾಳಿಗೆ ಹಮಾಸ್ ಮುಖ್ಯಸ್ಥನ ಮೂವರು ಮಕ್ಕಳು, ಇಬ್ಬರು ಮೊಮ್ಮಕ್ಕಳು ಬಲಿ..!

  ಕೈರೋ: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು ಹಾಗೂ ಇಬ್ಬರು ಮೊಮ್ಮಕ್ಕಳು ಗಾಝಾದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಗೆ ಬಲಿಯಾಗಿದ್ದಾರೆ. ಈ ಮಾಹಿತಿಯನ್ನು ಪ್ಯಾಲೆಸ್ತೀನ್ ಇಸ್ಲಾಮಿಸ್ಟ್ ಗ್ರೂಪ್ ಪ್ರಕಟಿಸಿದೆ.

  ಗಾಝಾದ ಅಲ್-ಶತಿ ಶಿಬಿರದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಇಸ್ರೇಲ್  ನಡೆಸಿದ ವಾಯುದಾಳಿಯಲ್ಲಿ ಹಝೇಮ್, ಅಮೀರ್ ಹಾಗೂ ಮುಹಮ್ಮದ್ ಹತರಾಗಿದ್ದಾರೆ. ಅಂತೆಯೇ ಇಸ್ಮಾಯಿಲ್ ಅವರ ಇಬ್ಬರು ಮೊಮ್ಮಕ್ಕಳು ಕೂಡಾ ಮೃತಪಟ್ಟಿದ್ದಾರೆ.

   

  “ನಮ್ಮ ಬೇಡಿಕೆಗಳು ಸ್ಪಷ್ಟ ಮತ್ತು ನಿರ್ದಿಷ್ಟ. ಅವರಿಗೆ ಯಾವುದೇ ರಿಯಾಯಿತಿ ಇಲ್ಲ. ನನ್ನ ಮಕ್ಕಳ ರಕ್ತ, ಜನಸಾಮಾನ್ಯರ ರಕ್ತಕ್ಕಿಂತ ತುಟ್ಟಿಯೇನೂ ಅಲ್ಲ. ಸಂಧಾನ ಮಾತುಕತೆ ಕೊನೆ ಹಂತದಲ್ಲಿರುವಾಗ ನಮ್ಮ ಮಕ್ಕಳನ್ನು ಅವರು ಗುರಿ ಮಾಡಿದರೆ, ಅವರಿಗೆ ಭ್ರಮನಿರಸನವಾಗಲಿದೆ. ಹಮಾಸ್ ತನ್ನ ನಿಲುವನ್ನು ಬದಲಿಸುವಂತೆ ನಾವು ಒತ್ತಡ ತರಲಿದ್ದೇವೆ” ಎಂದು ಅಲ್ ಜಝೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹನಿಯೆಹ್ ಎಚ್ಚರಿಕೆ ನೀಡಿದ್ದಾರೆ. ಹಮಾಸ್ ನ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹನಿಯೆಹ್ ಅತ್ಯಂತ ಕಟುಮಾತಿಗೆ ಹೆಸರಾಗಿದ್ದು, ಗಾಝಾಪಟ್ಟಿಯಲ್ಲಿ ಇಸ್ರೇಲ್ ಜತೆಗಿನ ಯುದ್ಧದ ವೇಳೆ ನವೆಂಬರ್ ನಲ್ಲಿ ಇವರ ಕುಟುಂಬಕ್ಕೆ ಸೇರಿದ ಮನೆ ಧ್ವಂಸವಾಗಿತ್ತು.

  Share Information
  Advertisement
  Click to comment

  You must be logged in to post a comment Login

  Leave a Reply