ನೀರಿನಲ್ಲಿ ಮುಳುಗಿ ಮೂವರು ಮಕ್ಕಳ ಸಾವು

ಪುತ್ತೂರು, ಎಪ್ರಿಲ್ 3 : ನೀರಿನಲ್ಲಿ ಆಟವಾಡಲೆಂದು ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿಗೆ ಇಳಿದ ಮೂವರು ಮಕ್ಕಳು ಸಾವಿಗೀಡಾದ ಘಟನೆ ಪಾಣಾಜೆ ಸಮೀಪದ ಉಡ್ಡಂಗಳ ಎಂಬಲ್ಲಿ ನಡೆದಿದೆ.

 

ಸಾವಿಗೀಡಾದ ಮಕ್ಕಳನ್ನು ವಿಶ್ಮಿತಾ (13), ಚೈತ್ರಾ (10) ಹಾಗೂ ಜಿತೇಶ್ (13) ಎಂದು ಗುರುತಿಸಲಾಗಿದೆ.

ಮೃತಪಟ್ಟ ಮಕ್ಕಳೆಲ್ಲಾ ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಹಿನ್ನಲೆಯಲ್ಲಿ ಆಟವಾಡಲು ತೆರಳಿದ್ದರು ಎಂದು ಹೇಳಲಾಗಿದೆ.

ಬೆಟ್ಟಂಪಾಡಿ ಗ್ರಾಮಪಂಚಾಯತ್ ಗೆ ಸಂಬಂಧಪಟ್ಟ ನೀರಿನ ಟ್ಯಾಂಕ್ ಎಂದು ತಿಳಿದು ಬಂದಿದ್ದು, ಟ್ಯಾಂಕ್ ನಿರ್ಮಾಣ ಆಗಿ ಮೂರು‌ ತಿಂಗಳು ಆಗಿದ್ದು ಟ್ಯಾಂಕ್ ನಲ್ಲಿ  ಅರ್ಧ ಮಾತ್ರ ನೀರು ತುಂಬಿಸಿ ಇಟ್ಟಿದ್ದರು ಅಲ್ಲದೆ ಟ್ಯಾಂಕಿಗೆ ಬೀಗ ಕೂಡ ಹಾಕದೆ ಹಾಗೇ ಬಿಟ್ಟಿದ್ದು ಈ ಘಟನೆಗೆ ಕಾರಣ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆಗೆ ಗ್ರಾಮಪಂಚಾಯತ್ ವೈಫಲ್ಯ ಕಾರಣ ಎನ್ನುವುದು ಸ್ಥಳೀಯರ ಆರೋಪ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೋಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

VIDEO

48 Shares

Facebook Comments

comments