ಮಂಗಳೂರು ಪೊಲೀಸರ ಕಾರ್ಯಾಚರಣೆ ರೌಡಿ ಶೀಟರ್ ಆಕಾಶ್ ಭವನ್ ಶರಣ್ ಬಂಧನ

ಮಂಗಳೂರು ಎಪ್ರಿಲ್ 4: ಭೂಗತ ಲೋಕದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿರುವ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ರೌಡಿ ಶೀಟರ್ ಆಕಾಶ್ ಭವನ್ ಶರಣ್ ನನ್ನು ಬಂಧಿಸುವಲ್ಲಿ ಮಂಗಳೂರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಪ್ರಾಪ್ತೆಯ ಮೇಲೆ ಅತ್ಯಾಚಾರದ ಆರೋಪಿಯಾಗಿದ್ದು ಆತನ ಮೇಲೆ ಪೊಸ್ಕೋ ಕಾಯಿದೆ ಅಡಿ ಪ್ರಕರಣ ಇದೆ.

ರಾಜ್ಯ ಗೃಹ ಇಲಾಖೆಯ ಸೂಚನೆ ಮೇರೆಗೆ ಆಗಿನ ಮಂಗಳೂರು ಪೊಲೀಸ್ ಕಮಿಷನರ್ ಚಂದ್ರ ಶೇಖರ್ ಆತನನ್ನು ಬಂಧಿಸಿದ್ದರು.

ನಂತರದ ದಿನಗಳಲ್ಲಿ ಜಾಮೀನು ಪಡೆದು ಹೊ ಬಂದು ಮತ್ತೆ ಹಳೇ ಚಾಳಿ ಮೂಂದುವರೆಸಿದ್ದ.

ಟೈಗರ್ ಡ್ಯಾನ್ಸ್ ಕಲಿಯಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಆಕಾಶ್ ಭವನ ಶರಣ್ ಮೇಲೆ ಇದ್ದು, ಪೋಕ್ಸೋ ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಸುಮಾರು 18 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದು, ಮಂಗಳೂರು ಪೊಲೀಸರು ರೌಡಿ ಶೀಟರ್ ಆಕಾಶ್ ಭವನ್ ಶರಣ್ ನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

3 Shares

Facebook Comments

comments