Connect with us

DAKSHINA KANNADA

ಪುತ್ತೂರು ಗ್ಯಾಂಗ್ ರೇಪ್ ವಿಡಿಯೋ ಪಾರ್ವಡ್ ಮಾಡಿದ ಮೂವರ ಬಂಧನ

ಪುತ್ತೂರು ಗ್ಯಾಂಗ್ ರೇಪ್ ವಿಡಿಯೋ ಪಾರ್ವಡ್ ಮಾಡಿದ ಮೂವರ ಬಂಧನ

ಪುತ್ತೂರು ಜುಲೈ 6: ಗ್ಯಾಂಗ್ ರೇಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿರುವವರ ವಿರುದ್ದ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಸಮರ ಸಾರಿದ್ದು, ಮತ್ತೆ ವಿಡಿಯೋ ಹಂಚಿಕೆ ಆರೋಪದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶೌಕತ್ ಆಲಿ (34), ನಜೀರ್ (33), ಜಾಬಿರ್ (26) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರ ಪೊಲೀಸರು ಗ್ಯಾಂಗ್ ರೇಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪಾರ್ವಡ್ ಮಾಡುತ್ತಿರುವ 8 ಮಂದಿ ಕಿಡಿಗೇಡಿಗಳನ್ನು ಈಗಾಗಲೇ ಬಂಧಿಸಿದ್ದು ಇಂದು ಮತ್ತೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ವಿಡಿಯೋ ಫಾರ್ವರ್ಡ್ ವಿಚಾರದಲ್ಲಿ 11 ಆರೋಪಿಗಳ ಸೆರೆಯಾಗಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಇದಾಗಿದ್ದು, ಪುತ್ತೂರು ಖಾಸಗಿ ಕಾಲೇಜಿನ ವಿಧ್ಯಾರ್ಥಿನಿಯ ಮೇಲೆ ಆಕೆಯ 5 ಮಂದಿ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಅತ್ಯಾಚಾರದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಕ್ಷ್ಮೀಪ್ರಸಾದ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡದಂತೆ ಮತ್ತು ಮೊಬೈಲ್ ಹಾಗೂ ಕಂಪ್ಯೂಟರ್ ಗಳಲ್ಲಿ ಉಳಿಸದಂತೆ ಸಾರ್ವಜನಿಕರಿಗ ಎಚ್ಚರಿಕೆ ನೀಡಿದ್ದು, ವಿಡಿಯೋ ಪಾರ್ವರ್ಡ್ ಮಾಡುವವರ ವಿರುದ್ದ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದರು.

Facebook Comments

comments