ಅಕ್ರಮ ಪಡಿತರ ಸಾಗಾಟಕ್ಕೆ ಯತ್ನ ಲಾರಿ ಅಡ್ಡಗಟ್ಟಿ ಪೊಲೀಸರಿಗೆ ಹಿಡಿದುಕೊಟ್ಟ ಸ್ಥಳೀಯರು

ಮಂಗಳೂರು ಜುಲೈ 6: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ನಾಗರಿಕರೆ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಮಂಗಳೂರು ನಗರದ ಕುಲಶೇಖರ ಬಳಿ ತಡ ರಾತ್ರಿ ಲಾರಿಯಲ್ಲಿ ಪಶು ಆಹಾರದ ಜೊತೆ ಸಾಗಾಟ ಮಾಡುತ್ತಿದ್ದಾಗ ಗಮನಿಸಿದ ಸ್ಥಳಿಯರು ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಅಕ್ರಮವಾಗಿ ಅಕ್ಕಿ ಮಾರಾಟದ ಈ ಜಾಲ ಪತ್ತೆಯಾಗಿದೆ.

ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿದ ಸಂದರ್ಭ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಲಾರಿಯಲ್ಲಿ ಪಶು ಆಹಾರದ ಮೂಟೆಗಳ ಅಡಿಯಲ್ಲಿ ಸುಮಾರು 50 ಕ್ವಿಂಟಲ್‌ನಷ್ಟು ಅಕ್ಕಿಯನ್ನು ಪತ್ತೆಯಾಗಿದೆ. ಅದನ್ನು ಸ್ಥಳಿಯ ಪೊಲಿಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲಿಸರು ಕೈಗೊಂಡಿದ್ದು, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

20 Shares

Facebook Comments

comments