ಮಂಗಳೂರು ಅಗಸ್ಟ್ 19: ಆರ್ ಎಸ್ ಎಸ್ ಕಾರ್ಯಕರ್ತ  ಶರತ್ ಮಡಿವಾಳ ಹತ್ಯೆಗೆ ಪರೋಕ ಸಹಕಾರ ನೀಡಿದ ಆರೋಪದ ಮೇಲೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದೆ.

RSS ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ

ಜುಲೈ 4 ರಂದು ಬಂಟ್ವಾಳದ ಬಿ. ಸಿ ರೋಡ್ ಎಂಬಲ್ಲಿ ರಾತ್ರಿ ಬೈಕಿನಲ್ಲಿ ಬಂದ 3 ಮಂದಿ ದುಷ್ಕರ್ಮಿಗಳ ತಂಡ ಶರತ್ ಮಡಿವಾಳ್ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿತ್ತು.

ಬಂಧಿತ ಆರೋಪಿಗಳನ್ನು ಪುತ್ತೂರಿನ ನಿವಾಸಿ ಜಬ್ಬಾರ್,
ಸಕಲೇಶಪುರದ ನಿವಾಸಿ ಸುಹೇಲ್, ಉಪ್ಪಿನಂಗಡಿ ನಿವಾಸಿ ಸಾಧಿಕ್ ಎಂದು ಗುರುತಿಸಲಾಗಿದೆ. ಬಂಧಿತರು ಕೊಲೆ ಪ್ರಮುಖ ಆರೋಪಿಗಳಿಗೆ ಸಹಾಯ ನೀಡಿದ ಹಿನ್ನಲೆಯಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಶರತ್ ಮಡಿವಾಳ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಒಟ್ಟು 8 ಜನರನ್ನು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬ ಈಗಾಗಲೇ ವಿದೇಶಕ್ಕೆ ಪರಾರಿಯಾಗಿರುವ ಸಂಶಯ ವ್ಯಕ್ತಪಡಿಸಿದ ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

 

 

0 Shares

Facebook Comments

comments