Connect with us

    FILM

    ‘ನನ್ನ ಮಗನನ್ನು ಕೊಂದವರು ಜೈಲಲ್ಲಿ ರಾಜರೋಷವಾಗಿದ್ದಾರೆ’: ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ

    ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅಲ್ಲಿಯೂ ಬಿಂದಾಸ್ ಆಗಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬೆಳವಣಿಗೆ ಮೃತ ರೇಣುಕಾಸ್ವಾಮಿ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದ್ದು ಹೆತ್ತವರು ಕಣ್ಣೀರಿಟ್ಟಿದ್ದಾರೆ.


    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದುಹೋಗಿದೆ. ಈ ಹೊತ್ತಲ್ಲಿ ದರ್ಶನ್ ಜೈಲೊಳಗೆ ಮೋಜು ಮಸ್ತಿ ಮಾಡ್ತಿದ್ದಾರೆ ಎನ್ನಲಾದ ಶಾಕಿಂಗ್ ಫೋಟೋ ವೈರಲ್ ಆಗಿದೆ. ಸಿಗರೇಟ್ ಸೇದುತ್ತಾ, ಕಾಫಿ ಕುಡ್ಕೊಂಡು, ಇಬ್ಬರು ರೌಡಿ ಶೀಟರ್‌ಗಳ ಜೊತೆ ಕೂತು ಮಾತನಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ದೊಡ್ಡ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಜೈಲೊಳಗೆ ದರ್ಶನ್‌ಗೆ ರಾಜಾತಿಥ್ಯ ಸಿಗ್ತಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
    ಮತ್ತೊಂದು ಕಡೆ ಮಗನನ್ನು ಕಳ್ಕೊಂಡು ರೇಣುಕಾಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ದರ್ಶನ್ ಮೋಜು ಮಸ್ತಿ ಫೋಟೋ ನೋಡಿ ರೇಣುಕಾಸ್ವಾಮಿ ಹೆತ್ತರವರಲ್ಲಿ ಆಕ್ರೋಶ ಶುರುವಾಗಿದೆ. ಅಲ್ಲದೆ ಮಗನ ಕೊಲೆ ಕೇಸ್​ನ್ನು ಸಿಬಿಐಗೆ ಕೊಡಿ ಎಂದು ರೇಣುಕಾಸ್ವಾಮಿ ತಂದೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ, ರಾಜ್ಯ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯ ಕೊಡಿಸೋ ಭರವಸೆ ಇದೆ ಎಂಬ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ. ಜೈಲಿನಲ್ಲಿ ದರ್ಶನ್‌ಗೆ ಇಂಥಾ ರಾಜಾತಿಥ್ಯ ನೀಡುತ್ತಿರೋದು ಸತ್ಯವೇ ಆಗಿದ್ದಾದ್ರೆ.. ಅದಕ್ಕೆ ಕಾರಣರಾದವರಿಗೆ ತನಿಖೆ ಮಾಡಿ ಶಿಕ್ಷೆ ನೀಡಲಿ ಅಂತಾ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಆಗ್ರಹಿಸಿದ್ದಾರೆ. ದರ್ಶನ್ ಕೇಸ್‌ನಲ್ಲಿ ಪೊಲೀಸರು ನಡೆದುಕೊಂಡಿರೋ ಮತ್ತು ನಡೆದುಕೊಳ್ತಿರೋ ರೀತಿಗೆ ಎಲ್ಲರು ಶಹಬ್ಬಾಶ್‌ ಎನ್ನುತ್ತಿದ್ದಾರೆ. ಆದ್ರೆ, ಜೈಲೊಳಗೆ ಮಾತ್ರ ದರ್ಶನ್‌ರನ್ನು ಸೆಲೆಬ್ರಿಟಿ ರೀತಿಯೇ ಟ್ರೀಟ್ ಮಾಡಲಾಗ್ತಿದ್ಯಾ ಎಂಬ ಪ್ರಶ್ನೆ ಹುಟ್ಟುವಂತಾ ಫೋಟೋ ವೈರಲ್ ಆಗಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply