Connect with us

DAKSHINA KANNADA

ಗಾಂಧಿ ಕೊಂದವರು, ಬ್ರಿಟಿಷರ ಮುಂದೆ ಕ್ಷಮೆ ಕೇಳಿದವರು ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವ್ಯಂಗ್ಯ

ಪುತ್ತೂರು, ಆಗಸ್ಟ್ 22: ಬ್ರಿಟಿಷರ ಮುಂದೆ ಕ್ಷಮೆಯಾಚಿಸಿದವರು, ಗಾಂಧೀಜಿಯನ್ನು ಕೊಂದವರು ಇತ್ತೀಚಿನ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಆಗಸ್ಟ್ 26 ರಂದು ನಡೆದ ಪುತ್ತೂರು ಬ್ಲಾಕ್ ಮತ್ತು ವಿಟ್ಲ ಬ್ಲಾಕ್ ಕಾಂಗ್ರೇಸ್ ವತಿಯಿಂದ ನಡೆದ ಸ್ವಾತಂತ್ರ್ಯದ ಅಮೃತ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ.

ಬ್ರಿಟಿಷರ ಮುಂದೆ ಕ್ಷಮಾಪಣೆ ಕೇಳಿದ,ಗಾಂಧೀಜಿಯವರನ್ನು ಕೊಂದ ಈ ಮಂದಿಗೆ ಸ್ವಾತಂತ್ರ್ಯದ ಇತಿಹಾಸವೇ ತಿಳಿದಿಲ್ಲ. ಸ್ವಾತಂತ್ರ್ಯದ ಇತಿಹಾಸವನ್ನು ತಿರುಚುವ ಪ್ರಯತ್ನದಲ್ಲಿ ಈ ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಮೇಲೆ ಮೊಟ್ಟೆ ಎಸೆಯುವ ಮೂಲಕ ಅವಮಾನ ಮಾಡುವ ಕೃತ್ಯದಲ್ಲಿ ಇಂಥ ವ್ಯಕ್ತಿಗಳು ತೊಡಗಿಕೊಂಡಿದ್ದಾರೆ.

ಮಡಿಕೇರಿಯ ಜನರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಜನವರಿ 26 ರಂದು ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿಗೆ ತೆರಳಿ ಹೋರಾಟ ನಡೆಸುವ ಮೂಲಕ ಅಲ್ಲಿನ ಜನರಿಗೆ ಸ್ವಾತಂತ್ರ್ಯ ನೀಡಬೇಕು ಎಂದರು.

Advertisement
Click to comment

You must be logged in to post a comment Login

Leave a Reply