DAKSHINA KANNADA
ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹತ್ಯೆಗೆ ಸಂಚು?
ಮಂಗಳೂರು, ಆಗಸ್ಟ್ 22: ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ, ಸಿಸಿಬಿ ಪೊಲೀಸ್ ಎಂದು ಹೇಳಿ ಕೆಲ ಹಿಂದೂಗಳೇ ಬಂದು ನನ್ನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ಸ್ವತಃ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆರೋಪಿಸಿದ್ದಾರೆ.
ಈ ಬಗ್ಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜೇಶ್ ಪವಿತ್ರನ್ ಅವರ ಮಾಜಿ ಕಾರು ಚಾಲಕ ಸುರತ್ಕಲ್‌ನ ಮುಕ್ಕ ನಿವಾಸಿ ಕಿರಣ್ ಮನೆಗೆ ಆ.17 ರಂದು ರಾತ್ರಿ 9 ಗಂಟೆಗೆ 5 ಜನ ಅಪರಿಚಿತರು ಬಂದು ರಾಜೇಶ್ ಪವಿತ್ರನ್ ಅವರ ಚಲನ, ವಲನ, ವಹಿವಾಟು ಬಗ್ಗೆ ವಿಚಾರಿಸಿದ್ದಾರೆ.
ಆಗ ನೀವು ಯಾರೆಂದು ಕೇಳಿದಾಗ ನಾವು ಸಿಸಿಬಿ ಪೊಲೀಸರು ಎಂದು ಹೇಳಿ ಬಂದೂಕು ತೋರಿಸಿ ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಸುರತ್ಕಲ್ ಪೊಲೀಸ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಆ ರಾತ್ರಿ ಕಿರಣ್ ಮನೆಗೆ ಬಂದವರು ಹಿಂದೂಗಳೇ ಎಂದು ನನಗೆ ಖಚಿತ ಮಾಹಿತಿ ಬಂದಿದೆ. ಇದು ನಮಗೆ ನಿಜವಾಗಿ ನೋವಾಗಿದೆ. ಬಿಜೆಪಿ ಸರಕಾರದಡಿ ಹಿಂದೂ ನಾಯಕರಿಗೆ ಪ್ರಾಮುಖ್ಯತೆ ಇಲ್ಲ. ಮುತಾಲಿಕ್ ಸೇರಿ ಹಲವರಿಗೆ ನೀಡಿದ ಭದ್ರತೆ ಬಿಜೆಪಿ ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಅವರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಿ ಎಂದು ಹೇಳಿದ ಅವರು ಎಲ್ಲವೂ ಆದ ಮೇಲೆ ಶಾಂತಿ ಮಾತುಕತೆ ಬೇಡ ಎಂದು ಹೇಳಿದರು.