KARNATAKA
ಕಾಂಗ್ರೆಸ್ ಕಚೇರಿಯಲ್ಲಿ ಕಾಣಿಸಿಕೊಂಡ ಸಾವರ್ಕರ್ ಫೋಟೋ..!
ವಿಜಯಪುರ, ಆಗಸ್ಟ್ 22: ರಾಜ್ಯಾದ್ಯಂತ ಸಾವರ್ಕರ್ ಫೋಟೋ-ಫ್ಲೆಕ್ಸ್ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲಿ ರಾತ್ರೋರಾತ್ರಿ ಅವರ ಫೋಟೋ ರಾರಾಜಿಸಿದೆ.
ಕಾಂಗ್ರೆಸ್ ನಾಯಕರು ಸಾವರ್ಕರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ಆ ಪಕ್ಷದ ಕಚೇರಿ ಸುತ್ತಾ ಸಾವರ್ಕರ್ ಫೋಟೋಗಳೇ ಇದ್ದವು. ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರಿ ಕೆಲವರು ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ.
ಕಟ್ಟಡದ ಸುತ್ತ ಸಾರ್ವಕರ್ ಫೋಟೋಗಳು ಇರುವುದನ್ನು ಕಂಡು ಸುತ್ತಮುತ್ತಲ ಜನ ಅಚ್ಚರಿಗೊಂಡಿದ್ದಾರೆ. ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲು, ಬೋರ್ಡ್ಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ.
You must be logged in to post a comment Login