Connect with us

    LATEST NEWS

    ಟ್ರೈನ್ ಲೋಕೋಪೈಲೆಟ್ ಇಲ್ಲದೆ 70 ಕಿಲೋಮೀಟರ್ ಚಲಿಸಿದ ರೈಲು – ವಿಡಿಯೋ ವೈರಲ್

     ಪಂಜಾಬ್ ಫೆಬ್ರವರಿ 25:  ಗೂಡ್ಸ್ ರೈಲೊಂದು ಲೋಕೋಪೈಲೆಟ್ ಇಲ್ಲದೆ ಬರೋಬ್ಬರಿ 70 ಕಿಲೋ ಮೀಟರ್ ಚಲಿಸಿದ ಘಟನೆ ಪಠಾಣ್ ಕೋಟ್ ಎಂಬಲ್ಲಿ ನಡೆದಿದೆ. ರೈಲು ಐದಕ್ಕೂ ಅಧಿಕ ನಿಲ್ದಾಣಗಳನ್ನು ದಾಟಿದ್ದರೂ ಯಾವುದೇ ಅಪಾಯ ಉಂಟಾಗಿಲ್ಲ.
    ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡ್ರೈವರ್ ಪಠಾಣ್ ಕೋಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಮೊದಲು ಹ್ಯಾಂಡ್ ಬ್ರೇಕ್ ಹಾಕೋದನ್ನು ಮರೆತಿದ್ದಾರೆ. ಪರಿಣಾಮ ರೈಲು ನಿಧಾನವಾಗಿ ಚಲಿಸಲು ಪ್ರಾರಂಭಿಸಿದೆ.
    ಗೂಡ್ಸ್​ ಟ್ರೈನ್​ನಲ್ಲಿ ​ ಕಲ್ಲುಗಳು ಇದ್ದವು. ಡ್ರೈವರ್ ಇಲ್ಲದೇ ಹಳಿಯಲ್ಲಿ ಓಡಲು ಶುರುಮಾಡಿದ ಟ್ರೈನು ಬರೋಬ್ಬರಿ ಐದು ನಿಲ್ದಾಣಗಳನ್ನು ದಾಟಿ ಹೋಗಿದೆ. ನಂತರ ಉಚಿ ಬಸ್ಸಿನಲ್ಲಿ  ನಿಲ್ಲಿಸಲಾಗಿದೆ. ಮರದ ತುಂಡುಗಳನ್ನು ಇಟ್ಟು ರೈಲನ್ನು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ. ಇನ್ನು ಡ್ರೈವರ್ ಇಲ್ಲದೇ ಪ್ರಯಾಣಿಸಿದ ಗೂಡ್ಸ್​ ಟೈನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
    https://youtube.com/shorts/nizgV1VROXw
    Share Information
    Advertisement
    Click to comment

    You must be logged in to post a comment Login

    Leave a Reply