Connect with us

    BANTWAL

    ಬಂಟ್ವಾಳ – ಲಾರಿ ರಿವರ್ಸ್ ತೆಗೆಯುವ ವೇಳೆ ಡಿಕ್ಕಿ – ದ್ವಿಚಕ್ರ ವಾಹನ ಸವಾರ ಸಾವು

    ಬಂಟ್ವಾಳ, ಫೆಬ್ರವರಿ 25: ತರಕಾರಿ ಲಾರಿಯೊಂದು ರಿವರ್ಸ್ ತೆಗೆಯುವ ವೇಳೆ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನಪ್ಪಿದ ಘಟನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.


    ಮೃತರನ್ನು ಪಾಣೆಮಂಗಳೂರು – ಆಲಡ್ಕದಲ್ಲಿ ವಾಸ್ತವ್ಯವಿದ್ದ ಅಶ್ರಫ್ (32) ಎಂದು ಗುರುತಿಸಲಾಗಿದೆ. ಸ್ನೇಹತನಿಗೆ ಸಹಾಯ ಮಾಡಲು ಬಿಸಿರೋಡ್ ಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಶ್ರಫ್ ಇಂದು ಮುಂಜಾನೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿರುವ ಅಂಗಡಿಗೆ ಬಿಡಲು ತೆರಳಿದ್ದರು.

    ಹಾಗೆ 5:30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಇವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ. ಘಟನೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಅಶ್ರಫ್ ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply