Connect with us

  LATEST NEWS

  ಪ್ರಧಾನಿ ಮೋದಿ ಸಾಹಸ – ಸಮುದ್ರದೊಳಗಿನ ದ್ವಾರಕೆಗೆ ತೆರಳಿ ಶ್ರೀಕೃಷ್ಣನಿಗೆ ನವೀಲುಗರಿ ಅರ್ಪಿಸಿದ ಪ್ರಧಾನಿ

  ದ್ವಾರಕ ಫೆಬ್ರವರಿ 25 : ಪ್ರಧಾನಿ ನರೇಂದ್ರ ಮೋದಿಯವರು ಹೊಸತೊಂದು ಸಾಹಸ ಮಾಡಿದ್ದಾರೆ. ಇತಿಹಾಸದಲ್ಲಿ ಯಾವುದೇ ಪ್ರಧಾನಿ ಇಂತಹ ಅಪರೂಪದ ಸಾಹಸಕ್ಕೆ ಇಳಿದ ನಿದರ್ಶನ ಇಲ್ಲ. ಸಮುದ್ರದ ಆಳದಲ್ಲಿರುವ ದ್ವಾರಕ ನಗರದ ಬಳಿ ತೆರಳಿ ಅಲ್ಲಿ ಶ್ರೀಕೃಷ್ಣನ ದ್ವಾರಕ ದರ್ಶನ ಮಾಡಿದ್ದಾರೆ. ಸಮುದ್ರದೊಳಗಿರುವ ದ್ವಾರಕಾಗೆ ತೆರಳಿದ ಮೋದಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ನವಿಲು ಗರಿಗಳನ್ನು ಸಮುದ್ರದೊಳಗೆ ಒಯ್ದು ಶ್ರೀ ಕೃಷ್ಣನಿಗೆ ಸಮರ್ಪಿಸಿದ್ದಾರೆ.


  ಸ್ಕೂಬಾ ಡೈವಿಂಗ್‌ ಮಾಡಿ ಪ್ರಾಚೀನ ದ್ವಾರಕಾ ನಗರದಲ್ಲಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ದ್ವಾರಕ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಮೋದಿ ಅತ್ಯಂತ ಕಠಿಣವಾದ ಸಮುದ್ರದೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವುದು ಭಾರಿ ಶ್ಲಾಘನೆಗೆ ಒಳಗಾಗಿದೆ. ನಾನು ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರದ ‘ದರ್ಶನ’ ಮಾಡಿದೆ. ಪುರಾತತ್ತ್ವ ಶಾಸ್ತ್ರಜ್ಞರು ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿಯೂ, ದ್ವಾರಕಾದ ಬಗ್ಗೆ ಹೇಳಲಾಗುತ್ತದೆ, ಇದು ಸುಂದರವಾದ ದ್ವಾರಗಳು ಮತ್ತು ಎತ್ತರದ ಕಟ್ಟಡಗಳನ್ನು ಹೊಂದಿರುವ ನಗರ ಎಂದು ಹೇಳಲಾಗುತ್ತದೆ ಎಂದರು.


  ನವಿಲುಗರಿಗಳನ್ನು ತೆಗೆದುಕೊಂಡು ಹೋಗಿ ಶ್ರೀಕೃಷ್ಣನ ಪಾದಗಳಿಗೆ ಅರ್ಪಿಸಬೇಕೆಂಬ ಹಲವು ವರ್ಷಗಳ ಕನಸು ಇದೀಗ ನನಸಾಗಿದೆ’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply