Connect with us

    LATEST NEWS

    ತಿರುವನಂತಪುರ: ಮಲಯಾಳಂ ಖ್ಯಾತ ನಟಿ ಮನೆಯಲ್ಲಿ ಶವವಾಗಿ ಪತ್ತೆ!

    ತಿರುವನಂತಪುರ, ಸೆಪ್ಟೆಂಬರ್ 01: ಮಲಯಾಳಂ ನಟಿ ಅಪರ್ಣಾ ಪಿ ನಾಯರ್ (31) ಅವರು ಗುರುವಾರ ಆಗಸ್ಟ್ 31 ರಂದು ತಿರುವನಂತಪುರಂ ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಗುರುವಾರ ಸಂಜೆ ಅಪರ್ಣಾ ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಕರಮಾನ ಪೊಲೀಸರು ಇದೀಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಅಪರ್ಣಾ ಪಿ ನಾಯರ್ ಚಂದನಮಜ, ಆತ್ಮಸಖಿ, ಮೈಥಿಲಿ ವೀಂದುಂ ವರುಮ್ ಮತ್ತು ದೇವಸ್ಪರ್ಶಂನಂತಹ ಟಿವಿ ಶೋಗಳಿಗೆ ಹೆಸರುವಾಸಿಯಾಗಿದ್ದರು. ದೂರದರ್ಶನ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ, ಮೇಘತೀರ್ಥಂ, ಮುತ್ತುಗೌ, ಅಚಾಯನ್ಸ್, ಕೊಡತಿ ಸಮಕ್ಷಮ್ ಬಾಲನ್ ವಕೀಲ್ ಮತ್ತು ಕಲ್ಕಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಪರ್ಣಾ ಕಾಣಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply