LATEST NEWS
ಮಂಗಳೂರು – ಯುವಕರ ಹೊಡೆದಾಟ: ಕೇಸು ದಾಖಲು

ಮಂಗಳೂರು ಸೆಪ್ಟೆಂಬರ್ 1 : ಮಂಗಳೂರು ಹೊರವಲಯದ ನೀರುಮಾರ್ಗ ಸಮೀಪ ಯುವಕರ ತಂಡವೊಂದು ಹೊಡೆದಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಶರೀಫ್, ಅಬ್ದುಲ್ ರಹಿಮಾನ್, ಚೇತನ್ ಹಾಗೂ ವಿಕ್ರಮ್ ಎಂದು ಗುರುತಿಸಲಾಗಿದೆ. ಆರೋಪಿಗಳು ಅಗಸ್ಟ್ 30ರಂದು ಬೆಳಗ್ಗೆ 11.15ಕ್ಕೆ ನೀರುಮಾರ್ಗ ಅಂಚೆ ಕಚೇರಿಯ ಬಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಕದಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
